1950-60ರ ದಶಕದಲ್ಲಿ ತಾರೆಯಾಗಿ ಬೆಳ್ಳಿ ತೆರೆಯ ಮೇಲೆ ಮಿಂಚಿದ್ದ ಬಾಲಿವುಡ್‌ನ ಹಿರಿಯ ನಟಿ ಶಕೀಲಾ (82) ಹೃದಯಾಘಾತ ದಿಂದ ಬುಧವಾರ ನಿಧನರಾಗಿದ್ದಾರೆ.

ಮುಂಬೈ(ಸೆ.22): 1950-60ರ ದಶಕದಲ್ಲಿ ತಾರೆಯಾಗಿ ಬೆಳ್ಳಿ ತೆರೆಯ ಮೇಲೆ ಮಿಂಚಿದ್ದ ಬಾಲಿವುಡ್‌ನ ಹಿರಿಯ ನಟಿ ಶಕೀಲಾ (82) ಹೃದಯಾಘಾತ ದಿಂದ ಬುಧವಾರ ನಿಧನರಾಗಿದ್ದಾರೆ.

ಶಕೀಲಾ ಅವರ ಅಂತ್ಯ ಸಂಸ್ಕಾರವನ್ನು ಗುರುವಾರ ನೆರವೇರಿಸಲಾಯಿತು. ಆರ್ ಪಾರ್, ಸಿಐಡಿ ಚಿತ್ರದ ಮೂಲಕ ಶಕೀಲಾ ಜನಮನ್ನಣೆ ಗಳಿಸಿದ್ದರು. ಬಾಬುಜಿ ಧೀರೇ ಚಲ್ನಾ, ಪ್ಯಾರ್ ಮೇ ಜರಾ ಸಮಾಲ್ನಾ ಮೊದಲಾದ ಜನಪ್ರಿಯ ಹಾಡುಗಳಿಗೆ ಶಕೀಲಾ ಹೆಜ್ಜೆಹಾಕಿದ್ದರು.

ಶಮ್ಮಿಕಪೂರ್‌'ರ ಪ್ರಸಿದ್ಧ ‘ಚೀನಾ ಟೌನ್’ ಚಿತ್ರದಲ್ಲಿಯೂ ಬಣ್ಣಹಚ್ಚಿದ್ದರು.