ಹುಬ್ಬಳ್ಳಿ( ನ.30): ಸಿದ್ಧಾರೂಢ ಮಠಕ್ಕೆ ಇಂದು ಬಾಲಿವುಡ್ ನಟಿ ಕಾಜೋಲ್ ಭೇಟಿ ನೀಡಿದ್ದಾರೆ. ಸಿದ್ಧಾರೂಢ ಸ್ವಾಮೀಜಿಗಳ ಗದ್ದುಗೆಯ ದರ್ಶನ ಪಡೆದರು.  ತಾಯಿ ತನುಜಾ ಮುಖರ್ಜಿ, ಮಗ ಯೋಗಿ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಗದ್ದುಗೆಗೆ ವಿಶೇಷ ಅಭಿಷೇಕ ಸಲ್ಲಿಸಿದರು.

ಸಿದ್ಧಾರೂಢ ಮಠದ ದರ್ಶನಕ್ಕಾಗಿ ವಿಶೇಷ ವಿಮಾನದಲ್ಲಿ ಆಗಮಿಸಿದ್ದ ಕಾಜೋಲ್ ಕುಟುಂಬ  ಸ್ವಾಮಿಗಳ ಗದ್ದುಗೆ ಬಳಿ ಧ್ಯಾನ ಮಾಡಿ, ಅಭಿಷೇಕ ಮಾಡಿಸಿದರು. ಬಾಲ್ಯದಿಂದಲೂ ಸಿದ್ಧಾರೂಢರ ಭಕ್ತರಾಗಿರುವ ನಟಿ ಕಾಜೋಲ್ ಇಲ್ಲಿಗೆ ನಡೆದುಕೊಳ್ಳುತ್ತಾರೆ.