ಸಲ್ಲೂಗೆ ಶುರುವಾಯ್ತು ಮತ್ತೊಂದು ಹೊಸ ಸಂಕಷ್ಟ

First Published 8, Jul 2018, 12:21 PM IST
Bollywood actor Salman Khan Gets Notice For Illegal Construction
Highlights
  • ಅರಣ್ಯ ಕಾಯಿದೆ ಉಲ್ಲಂಘಿಸಿ ಅಕ್ರಮ ಕಟ್ಟಡ ನಿರ್ಮಾಣ
  • ಸಲ್ಮಾನ್ ಕುಟುಂಬದ ಐವರ ವಿರುದ್ಧ ನೋಟಿಸ್ ಜಾರಿ

ಮುಂಬೈ(ಜು.08): ಸಮೂಹಿಕ ಅಪಘಾತ ಹಾಗೂ ಕೃಷ್ಣಮೃಗ ಪ್ರಕರಣಗಳಲ್ಲಿ ಕ್ಲೀನ್ ಚಿಟ್ ಪಡೆದ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಮುಂಬೈನ ಪಾನ್ವಾಲಾದಲ್ಲಿರೋ  ಫಾರ್ಮ್ ಹೌಸ್ ನಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆಂದು ಸಲ್ಮಾನ್ ಸಹಿತ ಐವರ ವಿರುದ್ಧ ನೋಟಿಸ್ ಜಾರಿಯಾಗಿದೆ. 
ಮಹಾರಾಷ್ಟ್ರದ ಅರಣ್ಯ ಇಲಾಖೆ ಜೂ. 9ರಂದು ನೋಟಿಸ್ ಜಾರಿಗೊಳಿಸಲಾಗಿದ್ದು ಅನಿವಾಸಿ ಭಾರತೀಯರೊಬ್ಬರು ಬಾಲಿವುಡ್ ನಟ ತಂದೆ ಸಲೀಂ ಖಾನ್ ವಿರುದ್ಧ ದೂರು ನೀಡಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ನೋಟಿಸ್ ಪ್ರಕಾರ ಪಾನ್ವಾಲಾ ವಾಜಪುರ ಪ್ರದೇಶದಲ್ಲಿ ಸಲ್ಮಾನ್ ಕುಟುಂಬದ  ಅಲ್ವಿರಾ,ಅರ್ಪಿತಾ, ಸಹೋದರರಾದ ಅರ್ಬಾಜ್, ಸೊಹೈಲ್ ಮತ್ತು ತಾಯಿ ಹೆಲೆನ್  ಅವರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಅರಣ್ಯ ಕಾಯಿದೆಯನ್ನು ಉಲ್ಲಂಘಿಸಿ ಪಾನ್ವಾಲಾ ವಾಜಪುರ ಪ್ರದೇಶದಲ್ಲಿ ಸಿಮೆಂಟ್/ ಕಾಂಕ್ರೀಟ್ ಕಾಮಗಾರಿ ನಿರ್ಮಿಸಲಾಗಿದ್ದು  2017, ನವೆಂಬರ್ 21 ರಂದು ದೂರು ದಾಖಲಾಗಿದೆ.

loader