ದಕ್ಷಿಣ ಏಷ್ಯಾ ರಾಷ್ಟ್ರದಲ್ಲಿ ತನ್ನ ಶಸ್ತ್ರಾಸ್ತ್ರ ಮಾರುಕಟ್ಟೆವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಎಫ್‌/ಎ-18 ಹಾರ್ನೆಟ್‌ ಫೈಟರ್‌ ಜೆಟ್‌ಗಳನ್ನು ಮಾರಾಟ ಮಾಡುವ ಕುರಿತು ಅಮೆರಿಕದ ಬೋಯಿಂಗ್‌, ಭಾರತದ ನೌಕಾದಳದ ಜತೆ ಮಾತುಕತೆ ನಡೆಸಿದೆ.

ಬ್ಲೂಮ್‌ಬರ್ಗ್‌: ದಕ್ಷಿಣ ಏಷ್ಯಾ ರಾಷ್ಟ್ರದಲ್ಲಿ ತನ್ನ ಶಸ್ತ್ರಾಸ್ತ್ರ ಮಾರುಕಟ್ಟೆವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಎಫ್‌/ಎ-18 ಹಾರ್ನೆಟ್‌ ಫೈಟರ್‌ ಜೆಟ್‌ಗಳನ್ನು ಮಾರಾಟ ಮಾಡುವ ಕುರಿತು ಅಮೆರಿಕದ ಬೋಯಿಂಗ್‌, ಭಾರತದ ನೌಕಾದಳದ ಜತೆ ಮಾತುಕತೆ ನಡೆಸಿದೆ.

ಸಿಂಗಾಪುರದಲ್ಲಿ ಆಯೋಜನೆಯಾದ ಏರ್‌ಶೋ ವೇಳೆ ಈ ಬಗ್ಗೆ ಸೋಮವಾರ ಮಾತನಾಡಿದ ಬೋಯಿಂಗ್‌ನ ಉಪಾಧ್ಯಕ್ಷ ಗೀನೆ ಕನ್ನಿಂಗ್‌ಹ್ಯಾಂ, ‘ಈ ಕುರಿತಾದ ಒಪ್ಪಂದದಲ್ಲಿ ತಾಂತ್ರಿಕತೆಯ ಮೌಲ್ಯಮಾಪನವಾಗಬೇಕಿದೆ,’ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಭಾರತೀಯ ನೌಕಾದಳ 57 ಜೆಟ್‌ಗಳಿಗಾಗಿ ಮತ್ತು ವಾಯು ಸೇನೆ 100 ವಿಮಾನಗಳ ಖರೀದಿಗೆ ಪ್ರಸ್ತಾಪನೆ ಸಲ್ಲಿಸಿದ್ದವು.

ಇದಕ್ಕಾಗಿ ಬೋಯಿಂಗ್‌ ಮತ್ತು ಸಾಬ್‌ ಅಬ್‌ ಸಂಸ್ಥೆಗಳು ಬಿಡ್‌ ಕೂಗಿದ್ದವು. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು 250 ಬಿಲಿಯನ್‌ ಡಾಲರ್‌ ಮುಂದಿನ ವರ್ಷದಲ್ಲಿ ಫೈಟರ್‌ ಜೆಟ್‌ಗಳು, ಗನ್‌ಗಳು ಮತ್ತು ಹೆಲ್ಮೆಟ್‌ಗಳ ಖರೀದಿಗಾಗಿ ಮೀಸಲಿಟ್ಟಿದ್ದಾರೆ. ಅಲ್ಲದೆ, ಮೇಕ್‌ ಇನ್‌ ಇಂಡಿಯಾ ಕಾರ್ಯಕ್ರಮದಡಿ ಭಾರತದಲ್ಲೇ ಈ ಅಸ್ತ್ರಗಳನ್ನು ತಯಾರಿಸುವಂತೆ ವಿದೇಶೀ ಕಂಪನಿಗಳಿಗೆ ಆಹ್ವಾನ ನೀಡಲಾಗಿದೆ. ಒಂದು ವೇಳೆ ಈ ಗುತ್ತಿಗೆ ತಮಗೆ ಲಭಿಸಿದಲ್ಲಿ, ತಾವು ಭಾರತಕ್ಕೆ ಬಂದು ಅಲ್ಲಿಯೇ ಶಸ್ತ್ರಾಸ್ತ್ರ ಕಂಪನಿಗಳನ್ನು ಆರಂಭಿಸುವುದಾಗಿ ಬೋಯಿಂಗ್‌, ಲಾಕ್‌ಹೀಡ್‌ ಮಾರ್ಟಿನ್‌ ಕಾಪ್‌ರ್‍ ಸೇರಿದಂತೆ ಇತರ ಕಂಪನಿಗಳು ಹೇಳಿಕೊಂಡಿವೆ.