ರಾಜ್ಯಕ್ಕೆ ಆಗಮಿಸಿದ ಹುತಾತ್ಮ ಯೋಧನ ಪಾರ್ಥಿವ ಶರೀರ

First Published 14, Feb 2018, 8:48 PM IST
Body of the Karnataka soldier arrive State
Highlights

ರಾಜ್ಯಕ್ಕೆ ಆಗಮಿಸಿದ ಹುತಾತ್ಮ ಯೋಧನ ಪಾರ್ಥಿವ ಶರೀರ

ರಾಜಸ್ಥಾನದ ಪೋಕ್ರಾನ್ ನಲ್ಲಿ ಮೃತಪಟ್ಟ ರಾಜ್ಯದ ಹರಿಹರದ ಯೋಧ ಜಾವೀದ್ ( 32 )ನ ಪಾರ್ಥೀವ ಶರೀರ ಮುಂಬೈನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.

ಫೆ.12 ರಂದು ರಾಜಸ್ಥಾನದ ಪೋಕ್ರಾನ್ ನಲ್ಲಿ ಆರ್ಮಿ ಮದ್ರಾಸ್ ಇಂಜನಿಯರಿಂಗ್ ಗ್ರೂಪ್'ಗೆ ತರಬೇತಿ ನೀಡುತ್ತಿದ್ದ ವೇಳೆ ‌ನಡೆದ ಬಾಂಬ್ ಸ್ಫೋಟದಲ್ಲಿ ಇವರು ಹುತಾತ್ಮರಾಗಿದ್ದರು. ದಾವಣಗೆರೆ ಜಿಲ್ಲೆ ಹರಿಹರದ ನಗರದ ಜಾವೀದ್ ಕಳೆದ 14 ವರ್ಷಗಳಿಂದ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕೆಐಎಎಲ್ ನ ಕಾರ್ಗೋ ಆವರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಯೋಧರಿಂದ ಗೌರವ ವಂದನೆ ನಂತರ ಸೇನಾ ವಾಹನದಲ್ಲಿ ದಾವಣಗೆರೆಯ ಹರಿಹರಕ್ಕೆ  ರವಾನೆಯಾಗಲಿದೆ.

loader