ಉಗ್ರರಿಂದ ಅಪಹರಿಸಲ್ಪಟ್ಟ ಯೋಧ ಸಾವುಪುಲ್ವಾಮಾ ಬಳಿ ಔರಂಗಜೇಬ್ ಮೃತದೇಹ ಪತ್ತೆ
ಶ್ರೀನಗರ(ಜೂ.14): ಹಿಜ್ಬುಲ್ ಉಗ್ರ ಸಮೀರ್ ಟೈಗರ್‌ನನ್ನು ಹತ್ಯೆಗೈದಿದ್ದ ಭಾರತೀಯ ಸೇನಾ ಯೋಧ ಔರಂಗಜೇಬ್ ಅವರ ಶವ ಪುಲ್ವಾಮಾ ಜಿಲ್ಲೆಯ ಗೂಸು ಬಳಿ ದೊರೆತಿದೆ. ಔರಂಗಜೇಬ್ ಅವರನ್ನು ಇಂದು ಶಸ್ತ್ರಸಜ್ಜಿತ ಉಗ್ರರು ಅಪಹರಿಸಿದ್ದರು.
23 ರಾಷ್ಟ್ರೀಯ ರೈಫಲ್ಸ್ ಗೆ ಸೇರಿದ ಯೋದ ಔರಂಗಜೇಬ್ ಇಂದು ಮಧ್ಯಾಹ್ನ ಕರ್ತವ್ಯದಿಂದ ಮನೆಗೆ ಮರಳುತ್ತಿದ್ದಾಗ ಶಸ್ತ್ರಸಜ್ಜಿತ ಉಗ್ರರ ಗುಂಪು ಅವರನ್ನು ಅಪಹರಿಸಿತ್ತು. ಆದರೆ ಕೆಲವೇ ಕ್ಷಣಗಳ ಮುಂವೆ ಅವರ ಮೃತದೇಹ ಪತ್ತೆಯಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಕಳೆದ ಮೇ ತಿಂಗಳಲ್ಲಿ ನಡೆದಿದ್ದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್ ಉಗ್ರ ಸಮೀರ್ ಟೈಗರ್‌ನನ್ನು ಯೋಧ ಔರಂಗಜೇಬ್ ಹತ್ಯೆ ಮಾಡಿದ್ದರು. ಸಮೀರ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಉಗ್ರರು ಬೆದರಿಕೆ ಕೂಡ ಹಾಕಿದ್ದರು. ಅದರಂತೆ ಔರಂಗಜೇಬ್ ಅವರನ್ನು ಅಪಹರಿಸಿ ಹತ್ಯೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
