ಮಹಿಳಾ ಏಕದಿನ ಕ್ರಿಕೆಟ್‌'ನಲ್ಲಿ ಅತಿಹೆಚ್ಚು ರನ್‌ಗಳಿಸಿದ್ದ ಖ್ಯಾತಿ ಪಡೆದಿರುವ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರಿಗೆ, ತೆಲಂಗಾಣ ಬ್ಯಾಡ್ಮಿಂಟನ್ ಸಂಸ್ಥೆ ಉಪಾಧ್ಯಕ್ಷ ವಿ. ಚಾಮುಂಡೇಶ್ವರಿನಾಥ್ ಐಷಾರಾಮಿ ಬಿಎಂಡಬ್ಲ್ಯೂ ಕಾರನ್ನು ಮಂಗಳವಾರ ಉಡುಗೊರೆಯಾಗಿ ನೀಡಿದ್ದಾರೆ. ಇಲ್ಲಿನ ಗೋಪಿಚಂದ್ ಅಕಾಡೆಮಿಯಲ್ಲಿ ಮಿಥಾಲಿ ರಾಜ್ ಅವರಿಗೆ ಕಾರನ್ನು ನೀಡಲಾಗಿದೆ.
ಹೈದರಾಬಾದ್(ಆ.02): ಮಹಿಳಾ ಏಕದಿನ ಕ್ರಿಕೆಟ್'ನಲ್ಲಿ ಅತಿಹೆಚ್ಚು ರನ್ಗಳಿಸಿದ್ದ ಖ್ಯಾತಿ ಪಡೆದಿರುವ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರಿಗೆ, ತೆಲಂಗಾಣ ಬ್ಯಾಡ್ಮಿಂಟನ್ ಸಂಸ್ಥೆ ಉಪಾಧ್ಯಕ್ಷ ವಿ. ಚಾಮುಂಡೇಶ್ವರಿನಾಥ್ ಐಷಾರಾಮಿ ಬಿಎಂಡಬ್ಲ್ಯೂ ಕಾರನ್ನು ಮಂಗಳವಾರ ಉಡುಗೊರೆಯಾಗಿ ನೀಡಿದ್ದಾರೆ. ಇಲ್ಲಿನ ಗೋಪಿಚಂದ್ ಅಕಾಡೆಮಿಯಲ್ಲಿ ಮಿಥಾಲಿ ರಾಜ್ ಅವರಿಗೆ ಕಾರನ್ನು ನೀಡಲಾಗಿದೆ.
ಏಕದಿನ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಜುಲೈ 12 ರಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮಿಥಾಲಿ ರಾಜ್ 6000 ರನ್ ಪೂರೈಸುವ ಮೂಲಕ ದಾಖಲೆ ನಿರ್ಮಿಸಿದ್ದರು. ಹೈದರಾಬಾದ್ನ ಕ್ರೀಡಾ ಆಡಳಿತಾಧಿಕಾರಿಯೊಬ್ಬರು 2007 ರಲ್ಲಿ ಮಿಥಾಲಿ ರಾಜ್ಗೆ ಕಾರನ್ನು ಉಡುಗೊರೆ ನೀಡಿದ್ದರು. ಕ್ರೀಡಾಪಟುಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಉಡುಗೊರೆ ನೀಡುತ್ತಿರುವುದಾಗಿ ಚಾಮುಂಡೇಶ್ವರಿನಾಥ್ ಹೇಳಿದ್ದಾರೆ.
ಇದಕ್ಕೂ ಮುನ್ನ ರಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಜಯಿಸಿದ್ದ ಪಿ.ವಿ. ಸಿಂಧು, ಮಹಿಳಾ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್, ಕುಸ್ತಿ ಪಟು ಸಾಕ್ಷಿ ಮಲ್ಲಿಕ್, ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ಅವರಿಗೂ ಐಷಾರಾಮಿ ಕಾರನ್ನು ಚಾಮುಂಡೇಶ್ವರಿನಾಥ್ ಉಡುಗೊರೆಯಾಗಿ ನೀಡಿದ್ದರು. ಇದರಲ್ಲಿ ದೀಪಾ ಕರ್ಮಾಕರ್ ಕಾರನ್ನು ಹಿಂದಿರುಗಿಸಿ ಅಷ್ಟೇ ಪ್ರಮಾಣದ ಹಣವನ್ನು ಪಡೆದಿದ್ದರು.
