ಬೆಂಗಳೂರು(ಆ.29): ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬೆಟ್ಟೇಗೌಡ ವಿರುದ್ಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಿಎಂಟಿಎಫ್ನಿಂದ ಎಫ್'ಐಆರ್ ದಾಖಲಾಗಿದೆ.

ಬಿಡಿಎ ಸಿಎ ನಿವೇಶನ ಅಕ್ರಮ ಮಾರಾಟ ಆರೋಪ ಹಿನ್ನಲೆಯಲ್ಲಿ ಬಿಡಿಎ ವೆಲ್'ಫೇರ್ ಅಸೋಸಿಯೇಷನ್ ವತಿಯಿಂದ  ಶ್ರೀಚಿಕ್ಕಯ್ಯ ಎಂಬುವವರು ದೂರು ನೀಡಿದ ಹಿನ್ನಲೆಯಲ್ಲಿ ಬಿಎಂಟಿಎಫ್ ದೂರು ದಾಖಲಿಸಿದೆ. ಖಾಸಗಿ ವ್ಯಕ್ತಿಗಳಿಗೆ ನೋಂದಣಿ ಮಾಡಿದ ಹಿನ್ನಲೆಯಲ್ಲಿ ಬೆಟ್ಟೇಗೌಡ, ಮಲ್ಲಣ ಹಾಗೂ ನಿವೇಶನ ಖರೀದಿಸಿದ್ದ ಪಿ.ಉದಯ್ ವಿರುದ್ದವೂ ದೂರು ದಾಖಲಾಗಿದೆ. ಜೊತೆಗೆ ಬಿಡಿಎ ಅಧಿಕಾರಗಳ ವಿರುದ್ಧವೂ ಬಿಎಂಟಿಎಫ್ ದೂರು ದಾಖಲಿಸಿದೆ.

ಬೆಂಗಳೂರಿನ ಜೆ.ಪಿ. ನಗರದ 9ನೇ ಹಂತದಲ್ಲಿ 33 ಎಕರೆ ಜಮೀನಿನಲ್ಲಿ ನಿರ್ಮಾಣಗೊಂಡಿರುವ ಬಿಡಿಎ ಬಡಾವಣೆಯಲ್ಲಿ ನಿವೇಶನವನ್ನು ಅಕ್ರಮ ಮಾರಾಟ ಮಾಡಿದ ಆರೋಪ ಬೆಟ್ಟೇಗೌಡ ಅವರ ಮೇಲಿದೆ. ಇವರು ಬಿಡಿಎ ಸಿಎ ಸೈಟ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದರು.