ಬೆಂಗಳೂರ ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ಗುತ್ತಿಗೆ ಆಧಾರದಲ್ಲಿ  150 ಎಲೆಕ್ಟ್ರಿಕ್ ಬಸ್ ಪಡೆಯಲು ಟೆಂಡರ್ ಆಹ್ವಾನಿಸಿದೆ. ಮೂರು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಸಿದ್ಧತೆ ನಡೆಸಿರುವ ಬಿಎಂಟಿಸಿ, ತ್ವರಿತಗತಿಯಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಕಾರ್ಯಾಚ ರಣೆಗೆ ಇಳಿಸುವ ಉತ್ಸಾಹದಲ್ಲಿದೆ.

ಬೆಂಗಳೂರು (ಡಿ.30): ಬೆಂಗಳೂರ ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ಗುತ್ತಿಗೆ ಆಧಾರದಲ್ಲಿ 150 ಎಲೆಕ್ಟ್ರಿಕ್ ಬಸ್ ಪಡೆಯಲು ಟೆಂಡರ್ ಆಹ್ವಾನಿಸಿದೆ. ಮೂರು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಸಿದ್ಧತೆ ನಡೆಸಿರುವ ಬಿಎಂಟಿಸಿ, ತ್ವರಿತಗತಿಯಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಕಾರ್ಯಾಚ ರಣೆಗೆ ಇಳಿಸುವ ಉತ್ಸಾಹದಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯೋಜನೆ ಪ್ರಕಾರ ಎಲ್ಲವೂ ಅಂದುಕೊಂಡಂತೆ ಸಾಗಿದರೆ 2018ರ ಏಪ್ರಿಲ್ ಅಥವಾ ಮೇ ತಿಂಗಳ ಅಂತ್ಯದ ವೇಳೆಗೆ ನಗರದಲ್ಲಿ ಸಾರ್ವಜನಿಕರಿಗೆ ಎಲೆಕ್ಟ್ರಿಕ್ ಬಸ್ ಸೇವೆ ಲಭ್ಯವಾಗಲಿದೆ. ದೇಶ ಅಥವಾ ವಿದೇಶದಲ್ಲಿ ಕನಿಷ್ಠ 300 ಎಲೆಕ್ಟ್ರಿಕ್ ಬಸ್‌ಗಳನ್ನು ಎರಡು ವರ್ಷ ನಿರ್ವಹಣೆ ಮಾಡಿದ ಅನುಭವ ಹೊಂದಿರುವ ಕಂಪನಿಗಳಿಂದ 10 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಡಿ ಎಲೆಕ್ಟ್ರಿಕ್ ಬಸ್ ಪಡೆಯಲು ನಿಗಮ ತೀರ್ಮಾನಿಸಿದೆ.32 ಆಸನ ಸಾಮರ್ಥ್ಯದ 9 ಮೀಟರ್ ಉದ್ದ ಅಥವಾ 41 ಆಸನದ 11ರಿಂದ 12 ಮೀಟರ್ ಉದ್ದದ ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್ ಪಡೆಯಲು ನಿರ್ಧರಿಸಿದೆ. 

 ಬಸ್‌ಗಳ ನೋಂದಣಿ, ವಿಮೆ, ಮೋಟಾರು ವಾಹನ ತೆರಿಗೆ, ಸೇವಾ ತೆರಿಗೆಯನ್ನು ಗುತ್ತಿಗೆ ಪಡೆಯುವ ಕಂಪನಿ ಭರಿಸಬೇಕು. ಚಾಲಕರು ಹಾಗೂ ಬಸ್ ನಿರ್ವಹಣೆಯನ್ನೂ ಕಂಪನಿಯೇ ಮಾಡಬೇಕು. ಬಿಎಂಟಿಸಿ ಯಿಂದ ನಿರ್ವಾಹಕ ಹಾಗೂ ಟಿಕೆಟ್ ವಿತರಿಸುವ ಯಂತ್ರ ನೀಡಲಾಗುವುದು ಎಂದು ಟೆಂಡರ್‌ನಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಬಸ್ ದಿನಕ್ಕೆ ಕನಿಷ್ಠ 200 ಕಿ.ಮೀ.ಸಂಚರಿಸಬೇಕು. ಪ್ರತಿ ಕಿ.ಮೀಗೆ ನಿಗಮವೇ ನಿರ್ದಿಷ್ಟ ಹಣ, ಹೆಚ್ಚುವರಿ ಸಂಚಾರಕ್ಕೆ ಪ್ರತ್ಯೇಕ ದರ ನೀಡುವುದಾಗಿ ಟೆಂಡರ್‌ನಲ್ಲಿ ಉಲ್ಲೇಖಿಸಲಾಗಿದೆ.