ಬಿಎಂ'ಟಿಸಿ ಪ್ರಯಾಣಿಕರಿಗೆ ಬಂಪರ್ ಖುಷಿ ವಿಚಾರ ನೀಡಿದ ಸಾರಿಗೆ ಸಂಸ್ಥೆ

ಬೆಂಗಳೂರು(ಆ.09): ರಾಜ್ಯ ಸಾರಿಗೆ ಸಂಸ್ಥೆ ಬಿಎಂಟಿಸಿ, ವೋಲ್ವೋ ಪ್ರಯಾಣಿಕರಿಗೆ ಖುಷಿಯ ವಿಚಾರ ನೀಡಿದೆ. ಬಿಎಂಟಿಸಿ ಹಾಗೂ ವೋಲ್ವೋ ಮಾಸಿಕ ಪಾಸುಗಳ ದರವನ್ನು ಶೇ.10ರಷ್ಟು ಕಡಿಮೆ ಮಾಡಲಾಗಿದೆ.

ಈ ಹಿನ್ನಲೆಯಲ್ಲಿ 3,910 ರೂ. ಇದ್ದ ಪಾಸ್ ದರ 3,570 ರೂ., 4,197 ರೂ.ಗಳಿದ್ದ ಪಾಸ್​ ದರ 3,832 ರೂ.ಗೆ ಹಾಗೂ 4,600 ರೂ.ಗಳಿದ್ದ ಪಾಸ್​ ದರ 3,990 ರೂ.ಗೆ ಇಳಿಕೆ ಮಾಡಲಾಗಿದೆ. ದರ ಇಳಿಕೆ ಪ್ರಸ್ತಾವನೆಗೆ ಸರ್ಕಾರ ಅಸ್ತು ನೀಡಿದ್ದು,ದರ ಪರಿಷ್ಕರಣೆ ಜಾರಿ ದಿನಾಂಕ ಶೀಘ್ರದಲ್ಲಿಯೇ ಪ್ರಕಟಿಸುವುದಾಗಿ ತಿಳಿಸಿದೆ.