ಡೀಸೆಲ್ ದರ ಕಡಿಮೆಯಾದರೂ ಬಿಎಂಟಿಸಿ ದರ ಇಳಿಕೆ ಮಾಡದ ರಾಜ್ಯ ಸರ್ಕಾರ , ಈಗ ಬಿಎಂಟಿಸಿ ದರ ಇಳಿಕೆ ಮಾಡುವುದರ ಮೂಲಕ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ.  ಕಡಿಮೆ ಅಂತರದ ಪ್ರಯಾಣ ಮಾಡುವವರಿಗೆ ಅನುಕೂಲ ಮಾಡಿಕೊಡಲು ಹಾಗೂ ಚಿಲ್ಲರೆ ಸಮಸ್ಯೆ ನಿವಾರಿಸಲು ಎರಡನೇ ಹಂತದ 12 ರೂ. ಟಿಕೆಟ್‌ ದರವನ್ನು 10 ರೂ. ಗೆ ಇಳಿಸಲಾಗಿದೆ.

ಬೆಂಗಳೂರು (ಏ.01): ಡೀಸೆಲ್ ದರ ಕಡಿಮೆಯಾದರೂ ಬಿಎಂಟಿಸಿ ದರ ಇಳಿಕೆ ಮಾಡದ ರಾಜ್ಯ ಸರ್ಕಾರ , ಈಗ ಬಿಎಂಟಿಸಿ ದರ ಇಳಿಕೆ ಮಾಡುವುದರ ಮೂಲಕ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಕಡಿಮೆ ಅಂತರದ ಪ್ರಯಾಣ ಮಾಡುವವರಿಗೆ ಅನುಕೂಲ ಮಾಡಿಕೊಡಲು ಹಾಗೂ ಚಿಲ್ಲರೆ ಸಮಸ್ಯೆ ನಿವಾರಿಸಲು ಎರಡನೇ ಹಂತದ 12 ರೂ. ಟಿಕೆಟ್‌ ದರವನ್ನು 10 ರೂ. ಗೆ ಇಳಿಸಲಾಗಿದೆ.

ಮುಂದಿನ ನಾಲ್ಕೈದು ದಿನಗಳಲ್ಲಿ ಈ ಹೊಸ ದರ ಜಾರಿಗೆ ಮಾಡಲು ಬಿಎಂಟಿಸಿ ಸಿದ್ಧತೆ ನಡೆಸಿದೆ. ಕಳೆದ ತಿಂಗಳು ಬಿಎಂಟಿಸಿಯಿಂದ ರಾಜ್ಯ ಸರಕಾರಕ್ಕೆ ದರ ಇಳಿಕೆ ಬಗ್ಗೆ ಪ್ರಸ್ತಾವನೆಯೊಂದು ಸಲ್ಲಿಕೆ ಮಾಡಲಾಗಿತ್ತು, ಈಗ ಸರಕಾರದ ಮಟ್ಟದಲ್ಲಿ ಚರ್ಚೆಯಾದ ಬಳಿಕ ದರ ಇಳಿಕೆಗೆ ಬಿಎಂಟಿಸಿ ಸಂಸ್ಥೆ ನಿರ್ಧರಿಸಿದೆ.

ಕಳೆದ ಮೂರ್ನಾಲ್ಕೂ ತಿಂಗಳುಗಳಿಂದ ಬಿಎಂಟಿಸಿ ಅಧಿಕಾರಿಗಳು ಟಿಕೆಟ್‌ ದರದ ಕುರಿತು ಸಮೀಕ್ಷೆ ನಡೆಸಿದ್ದಾಗ, ಒಂದನೇ ಹಂತಕ್ಕೆ 5 ರೂ. ದರವಿರುವಾಗ ಎರಡನೇ ಹಂತಕ್ಕೆ 12 ರೂ. ಏಕೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಅನೇಕರು ಪ್ರಶ್ನೆ ಮಾಡಿದ್ರು. ಹೀಗಾಗಿ ಈಗ ಬಿಎಂಟಿಸಿ ತನ್ನ ಎರಡನೇ ಸ್ಟೇಜ್​ ದರವನ್ನು ಕಡಿಮೆ ಮಾಡಿದ್ದುಮುಂದಿನ ವಾರದ ಅಂತ್ಯದಲ್ಲಿ ಈ ದರವನ್ನು ಜಾರಿಗೆ ತರಲಿದೆ. ಅಷ್ಟೇ ಅಲ್ಲದೆ ನಗರದಲ್ಲಿ ಬಿಎಂಟಿಸಿ ಅನುಭವಿಸುತ್ತಿರುವ ನಷ್ಟದ ಮಾರ್ಗಗಳಲ್ಲಿ ವಿಶೇಷ ಆಫರ್​ಗಳನ್ನ ನೀಡಲಿದ್ದು, ಸ್ಟೇಜ್​ ದರವನ್ನು ಕಡಿಮೆ ಮಾಡಲಿದೆ. ಇನ್ನೂ ಬಿಎಂಟಿಸಿಯ ಈ ನಿರ್ಧಾರಕ್ಕೆ ಪ್ರಯಾಣಿಕರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ..