ಚನ್ನಪಟ್ಟಣದ ಕಡೆ ಹೊರಡುತ್ತಿದ್ದ ಬಿಎಂಟಿಸಿ ಬಸ್ಕಾಮತ್ ಹೋಟೆಲ್ ಬಳಿ ನಿಲ್ಲಿಸಿತ್ತು. ವಿದ್ಯಾರ್ಥಿಗಳೆಲ್ಲ ಊಟಕ್ಕೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ಕಂಡು ಚಾಲಕ ಬಸ್ನಲ್ಲಿದ್ದ ಇನ್ನು ಕೆಲವು ವಿದ್ಯಾರ್ಥಿಗಳನ್ನು ಇಳಿಸಿದ್ದರಿಂದ ಹೆಚ್ಚಿನ ಪ್ರಾಣಾಪಾಯವಾಗಿಲ್ಲ.
ಬೆಂಗಳೂರು(ಡಿ.03): ಬೆಂಗಳೂರು - ಮೈಸೂರು ರಸ್ತೆಯ ಚನ್ನಪಟ್ಟಣ ಬಳಿ ಬಿಎಂಟಿಸಿ ಬಸ್ ಹೊತ್ತಿ ಉರಿದಿದೆ. ಶಾಲೆಯೊಂದು ಈ ಬಿಎಂಟಿಸಿ ಬಸ್ನ್ನು ಬುಕ್ ಮಾಡಿ ಪ್ರವಾಸಕ್ಕೆ ತೆರಳುತ್ತಿತ್ತು.
ಚನ್ನಪಟ್ಟಣದ ಕಡೆ ಹೊರಡುತ್ತಿದ್ದ ಬಿಎಂಟಿಸಿ ಬಸ್ಕಾಮತ್ ಹೋಟೆಲ್ ಬಳಿ ನಿಲ್ಲಿಸಿತ್ತು. ವಿದ್ಯಾರ್ಥಿಗಳೆಲ್ಲ ಊಟಕ್ಕೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ಕಂಡು ಚಾಲಕ ಬಸ್ನಲ್ಲಿದ್ದ ಇನ್ನು ಕೆಲವು ವಿದ್ಯಾರ್ಥಿಗಳನ್ನು ಇಳಿಸಿದ್ದರಿಂದ ಹೆಚ್ಚಿನ ಪ್ರಾಣಾಪಾಯವಾಗಿಲ್ಲ.
ಬಸ್ ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಲೇ ಬೆಂಕಿ ಹತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬಸ್ನಿಂದ ಇಳಿಯುವಾಗ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.