ಇದಲ್ಲದೆ ವಿವಿಧ ಕನ್ನಡ ಪರ ಸಂಘಟನೆಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೂಡ ಹಿಂದಿ ನಾಮಫಲಕ ತೆರವು ಮಾಡುವಂತೆ ಬಿಎಂಆರ್ ಸಿಎಲ್'ಸಿ ಮನವಿ ಮಾಡಿದ್ದವು .

ಬೆಂಗಳೂರು(ಆ.04): ಕನ್ನಡ ಪರ ಸಂಘಟನೆ ಮತ್ತು ರಾಜ್ಯ ಸರ್ಕಾರದ ಹೋರಾಟಕ್ಕೆ ಮಣಿದಿರುವ ಬಿಎಂಆರ್ ಎಲ್ ಸಿ ಅಧಿಕಾರಿಗಳು ಮೆಟ್ರೋ ನಿಲ್ದಾಣದಲ್ಲಿ ಹಾಕಲಾಗಿದ್ದ ಹಿಂದಿ ನಾಮಫಲಕ ತೆರವುಗೊಳಿಸಿದ್ದಾರೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಿಂದಿ ನಾಮಫಲಕ ತೆರವುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದಲ್ಲದೆ ವಿವಿಧ ಕನ್ನಡ ಪರ ಸಂಘಟನೆಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೂಡ ಹಿಂದಿ ನಾಮಫಲಕ ತೆರವು ಮಾಡುವಂತೆ ಬಿಎಂಆರ್ ಸಿಎಲ್'ಸಿ ಮನವಿ ಮಾಡಿದ್ದವು . ಹಿಂದಿ ಭಾಷೆ ಹೇರಿಕೆ ವಿರುದ್ಧ ಹೋರಾಟ ದಿನದಿಂದ ದಿನಕ್ಕೆ ತೀವ್ರತೆ ಪಡೆಯುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಹಿಂದಿ ನಾಮಫಕಲ ತೆರವುಗಳಿಸಿದ್ದಾರೆ. ಮೊದಲ ಹಂತದಲ್ಲಿ ಚಿಕ್ಕ ಪೇಟೆ ಮತ್ತು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಹಾಕಲಾಗಿದ್ದ ನಾಮಫಲಕ ತೆರವುಗೊಳಿಸಲಾಗಿದೆ.

(ಸಾಂದರ್ಭಿಕ ಚಿತ್ರ)