ಢಾಕಾ(ಸೆ.14): ಬಕ್ರಿದ್ ಅಂಗವಾಗಿ ನಿನ್ನೆ ಬಾಂಗ್ಲಾದೇಶದ ರಾಜಧಾನಿ ಢಾಕಾದ ರಸ್ತೆಗಳಲ್ಲಿ ರಕ್ತದ ಹೊಳೆಯೇ ಹರಿದಿದ್ದು, ಇಡೀ ವಿಶ್ವವೇ ಒಂದು ಕ್ಷಣ ಈ ದೃಶ್ಯವನ್ನು ನೋಡಿ ಬೆಚ್ಚಿ ಬಿದ್ದಿದೆ.
ಬಕ್ರಿದ್ ಆಚರಣೆಯ ಅಂಗವಾಗಿ ಢಾಕಾ ನಗರದ ರಸ್ತೆಗಳಲ್ಲಿ ಲೆಕ್ಕಕ್ಕೆ ಸಿಗದಷ್ಟು ಸಂಖ್ಯೆ ಕುರಿ, ಮೇಕೆ ಮತ್ತು ಗೋವುಗಳನ್ನು ಬಲಿ ನೀಡಲಾಗಿದ್ದು, ಈ ಸಂದರ್ಭದಲ್ಲಿ ರಸ್ತೆಯಲ್ಲಿ ರಕ್ತದ ಹೊಳೆಯೇ ಹರಿದಿದೆ. ಬಲಿ ಆಚರಣೆ ಮುಗಿದ ನಂತರ ಢಾಕಾದಲ್ಲಿ ಭಾರಿ ಮಳೆ ಸುರಿದದ್ದು ರಕ್ತದ ಹೊಳೆಗೆ ಕಾರಣವಾಗಿದೆ.
ಭಾರಿ ಮಳೆಯಿಂದಾಗಿ ರಸ್ತೆಯಲ್ಲಿದ್ದ ರಕ್ತ ಮಳೆ ನೀರಿನೊಂದಿಗೆ ಬೆರೆತು ಹರಿಯ ತೊಡಗಿದೆ. ನೀರೆಲ್ಲ ರಕ್ತದ ಬಣ್ಣಕ್ಕೆ ತಿರುಗಿದ್ದು ಇದರಿಂದಾಗಿ ಪ್ರಮುಖ ರಸ್ತೆಗಳೆಲ್ಲವೂ ರಕ್ತದ ಹೊಳೆಯಂತೆ ಕಾಣುತ್ತಿದೆ.
ಢಾಕಾ ರಸ್ತೆಗಳು ರಕ್ತದ ಹೊಳೆಯಾಗಿರವ ವಿಡಿಯೋ ಮತ್ತು ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಲ್ಲಿನ ಜನ ಈ ನೀರಿನ ಮಧ್ಯೆಯೇ ಓಡಾಟ ನಡೆಸುತ್ತಿರವುದು ಸಾಮಾನ್ಯವಾಗಿದೆ.
