ಇದರಲ್ಲಿ ಅತಿ ಹೆಚ್ಚು ಸರ್ಚ್ ಆಗಿರುವುದು ಮೋದಿಯ ತವರು ಉದ್ಯಮಶೀಲತೆ, ಸಣ್ಣ ವ್ಯಾಪಾರ, ಜ್ಯುವೆಲ್ಲರಿ ವ್ಯವಹಾರಕ್ಕೆ ಖ್ಯಾತವಾದ ರಾಜ್ಯ ಗುಜರಾತ್`ನಲ್ಲಿ. ಇನ್ನುಳಿದಂತೆ ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳು ನಂತರದ ಸ್ಥಾನದಲ್ಲಿವೆ
ನವದೆಹಲಿ(ನ.10): ಪ್ರಧಾನಮಂತ್ರಿ ನರೇಂದ್ರಮೋದಿ ದೇಶದ 23 ಬಿಲಿಯನ್ ನೋಟುಗಳನ್ನ ರದ್ದು ಮಾಡಿ ಆದೇಶ ಹೊರಡಿಸಿದ್ದೇ ತಡ ಕಾಳ ಧನಿಕರ ಎದೆಯಲ್ಲಿ ನಡುಕ ುಂಟಾಗಿತ್ತು. ಮೋದಿ ಪ್ರೆಸ್ ಮೀಟ್ ಮುಗಿದ ಕೆಲ ಸಮಯದಲ್ಲೇ ಗೂಗಲ್`ನ ಮುಗಿಬಿದ್ದು, ಬ್ಲಾಕ್ ಮನಿ ವೈಟ್ ಮಾಡುವುದು ಹೇಗೆ..? ಎಂಬ ಬಗ್ಗೆ ಲಕ್ಷ ಲಕ್ಷ ಸರ್ಚ್ ಆಗಿವೆಯಂತೆ.
ವಿಪರ್ಯಾಸವೆಂದರೆ, ಇದರಲ್ಲಿ ಅತಿ ಹೆಚ್ಚು ಸರ್ಚ್ ಆಗಿರುವುದು ಮೋದಿಯ ತವರು ಉದ್ಯಮಶೀಲತೆ, ಸಣ್ಣ ವ್ಯಾಪಾರ, ಜ್ಯುವೆಲ್ಲರಿ ವ್ಯವಹಾರಕ್ಕೆ ಖ್ಯಾತವಾದ ರಾಜ್ಯ ಗುಜರಾತ್`ನಲ್ಲಿ. ಇನ್ನುಳಿದಂತೆ ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳು ನಂತರದ ಸ್ಥಾನದಲ್ಲಿವೆ ಎಂದು ಎನ್`ಡಿಟಿವಿ ವರದಿ ಮಾಡಿದೆ.
