ನವದೆಹಲಿ[ಜು.04]: ಲೋಕಸಭಾ ಚುನಾವಣೆಯ ಬೆನ್ನಲ್ಲೇ ಮೇ ತಿಂಗಳಲ್ಲಿ ರಾಹುಲ್ ಗಾಂಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಾದರೂ, ಪಕ್ಷದ CWC ಸಮಿತಿ ಅದನ್ನು ನಿರಾಕರಿಸಿತ್ತು. ಹೀಗಿದ್ದರೂ ರಾಹುಲ್ ಮಾತ್ರ ತಮ್ಮ ನಿರ್ಧಾರದಿಂದ ಹಿಂದೆ ಸರಿದಿರಲಿಲ್ಲ. ಇದೀಗ ತಾವು ರಾಜೀನಾಮೆ ಸಲ್ಲಿಸಿದ ಒಂದು ತಿಂಗಳ ಬಳಿಕ 4 ಪುಟಗಳ ಸುದೀರ್ಘ ಪತ್ರವೊಂದನ್ನು ಪೋಸ್ಟ್ ಮಾಡಿ ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಆದರೀಗ ರಾಜೀನಾಮೆ ಬೆನ್ನಲ್ಲೇ ಟ್ವಿಟರ್ ನಲ್ಲು ಈ ವಿಚಾರ ಭಾರೀ ಸೌಂಡ್ ಮಾಡುತ್ತಿದ್ದು, ಪರ ವಿರೋಧಗಳು ವ್ಯಕ್ತವಾಗಿವೆ.

ರಾಹುಲ್ ಗಾಂಧಿ ರಾಜೀನಾಮೆ ಪತ್ರದ ಕುರಿತಾಗಿ ಬರೆದುಕೊಂಡಿರುವ ಯಶವಂತ್ ದೇಶ್ ಮುಖ್ 'ರಾಹುಲ್ ಗಾಂಧಿ ಬರೆದಿರುವ ಒಟ್ಟು 15 ಪ್ಯಾರಾಗಳಲ್ಲಿ, 10ನ್ನು RSS ಹಾಗೂ ಅದು ಹೊಂದಿರುವ ಭಾರತದ ಕಲ್ಪನೆಯನ್ನು ದೂಷಿಸಲು ಮೀಸಲಿಟ್ಟಿದ್ದಾರೆ. ಅಲ್ಲದೇ ಇಲ್ಲಿ ನಡೆಯುತ್ತಿರುವ ಚುನಾವಣೆಗಳು ಸ್ವತಂತ್ರ ಹಾಗೂ ಪಾರದರ್ಶವಾಗಿ ನಡೆಯುತ್ತಿಲ್ಲ ಎಂದಿದ್ದಾರೆ. ಕೇವಲ 3ನೇ ಪ್ಯಾರಾವಷ್ಟೇ ಉಪಯುಕ್ತವಾಗಿದೆ' ಎಂದಿದ್ದಾರೆ.

ರಾಜ್ಯ ಬಿಜೆಪಿ ಘಟಕದ ಅಧಿಕೃತ ಟ್ವಿಟರ್ ಖಾತೆಯಿಂದಲೂ ರಾಹುಲ್ ರಾಜೀನಾಮೆ ಕುರಿತಾಗಿ ಟ್ವೀಟ್ ಮಾಡಲಾಗಿದೆ. 'ಮುಂದಿನ ನಾಲ್ಕಲು ವರ್ಷಗಳವರೆಗೆ ಪಕ್ಷವನ್ನು ಬೆಳೆಸಲು ಗಾಂಧೀಯೇತರ ಘೋಷಣೆಗಳನ್ನು ಬಳಸಲಾಗುತ್ತದೆ. ಇದಾದ ಬಳಿಕ ರಾಹುಲ್ ಗಾಂಧಿ ಅದ್ಧೂರಿ ಎಂಟ್ರಿ ಮೂಲಕ ಪಕ್ಷದ ಜವಾಬ್ದಾರಿ ಮತ್ತೆ ವಹಿಸಿಕೊಂಡು ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ. ಆದರೆ ಇತಿಹಾಸ ಮತ್ತೆ ಮರುಕಳಿಸಲಿದೆ ಹಾಗೂ ಬಿಜೆಪಿ ಜಯಶಾಲಿಯಾಗುತ್ತದೆ' ಎಂದಿದೆ.

ಇದೇ ರೀತಿ ಹಲವರು ರಾಹುಲ್ ರಾಜೀನಾಮೆ ಕುರಿತಾಗಿ ವ್ಯಂಗ್ಯವಾಡಿದ್ದಾರೆ.

ಈ ಎಲ್ಲಾ ಟೀಕೆಗಳ ನಡುವೆ ರಾಹುಲ್ ನಿರ್ಧಾರವನ್ನು ಹಲವರು ಸ್ವಾಗತಿಸಿ, ಶ್ಲಾಘಿಸಿದ್ದಾರೆ. ರಾಜೀನಾಮೆ ನೀಡಿದ ರಾಹುಲ್ ಧೈರ್ಯಕ್ಕೆ ಸಲಾಂ ಎಂದಿದ್ದಾರೆ.

ಒಟ್ಟಾರೆಯಾಗಿ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವೆರೆಯುತ್ತಾರೆಂಬ ಭರವಸೆ ಇಟ್ಟುಕೊಂಡಿದ್ದವರಿಗೆ, ಈ ಭಾವನಾತ್ಮಕ ಪತ್ರದ ವಿದಾಯ ಭಾರೀ ನಿರಾಸೆಯುಂಟು ಮಾಡಿದೆ.