ಮೋರಿಗಾವೊಂ(ಅಸ್ಸಾಂ):ಶಾಸಕರರೊಬ್ಬರು ಸೆಕ್ಸ್'ನಲ್ಲಿ ತೊಡಗಿಸಿಕೊಂಡಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಘಟನೆ ಅಸ್ಸಾಂ'ನ ಮೋರಿಗಾವೊಂ'ನಲ್ಲಿ ನಡೆದಿದೆ.

ವೈರಲ್ ಆದ ವಿಡಿಯೋ ಮೋರಿಗಾವೊಂ ಕ್ಷೇತ್ರದ ಶಾಸಕ ರಮಾಕಾಂತ್ ದೇವ್ರಿ ಅವರನ್ನೇ ಹೋಲುತ್ತಿದ್ದು, ದೃಶ್ಯದಲ್ಲಿ ಶಾಸಕ ರೀತಿಯ ವ್ಯಕ್ತಿ ಹೋಟೆಲ್'ನಲ್ಲಿ ಮಹಿಳೆಯೊಂದಿಗೆ ಅಶ್ಲೀಲ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ನಡುವೆ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ರಮಾಕಾಂತ್ ದೇವ್ರಿ, ಇದು ನನ್ನನ್ನು ತೇಜೋವಧೆಗೊಳಿಸುವ  ಹುನ್ನಾರಗೊಳಿಸಲು ನನ್ನ ರಾಜಕೀಯ ವಿರೋಧಿಗಳು ಮಾಡಿರುವ ಸಂಚಾಗಿದೆ.ಅಲ್ಲದೆ ಶೀಘ್ರದಲ್ಲಿಯೇ ರಾಜ್ಯದಲ್ಲಿ ಸಂಪುಟ ವಿಸ್ತರಣೆಯಾಗಲಿದ್ದು, ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷೆಯಾಗಿದ್ದೇನೆ. ಈ ಆರೋಪ ನನ್ನನ್ನು ಸಚಿವ ಸ್ಥಾನದಿಂದ ತಪ್ಪಿಸುವ ಉದ್ದೇಶವಾಗಿದೆ' ಎಂದು ವಿಡಿಯೊದಲ್ಲಿರುವುದು ನಾನಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ'.

ಪೊಲೀಸರು ವಿಡಿದಲ್ಲಿರುವ ಸತ್ಯಾಸತ್ಯತೆಯನ್ನು ಪರೀಕ್ಷಿಸಲಿ ಒಂದು ವೇಳೆ ಅಲ್ಲಿರುವುದು ನಾನಾಗಿದ್ದರೆ, ರಾಜಕೀಯದಿಂದ ನಿವೃತ್ತನಾಗುತ್ತೇನೆ ಎಂದು ಸವಾಲಾಕಿದ್ದಾರೆ. ಆದರೆ ಬಿಜೆಪಿ ಮುಖಂಡರ್ಯಾರು ಶಾಸಕನ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಇಂಡಿಯಾ ಟುಡೆ ವೆಬ್'ಸೈಟ್ ವರದಿ ಮಾಡಿದೆ.