ಯೋಗಿ ಆದಿತ್ಯನಾಥ್ ಆಶಯಕ್ಕೆ ಮನ್ನಣೆ ನೀಡದ ಬಿಜೆಪಿ ರಾಷ್ಟ್ರಾಧ್ಯಕ್ಷ ಶಾ

First Published 22, Feb 2018, 12:00 PM IST
BJPs choice of candidate for Gorakhpur Bye polls
Highlights

ಬಿಜೆಪಿಯಿಂದ ಇದೀಗ ದೊಡ್ಡ ಮಾಹಿತಿಯೊಂದು ಹೊರಬಿದ್ದಿದೆ. ಇದರಲ್ಲಿ  ಮುಂದಿನ ಬಾರಿ ಗೋರಖ್’ಪುರದಲ್ಲಿ ನಡೆಯಲಿರುವ ಲೋಕಸಭಾ ಉಪಚುನಾವಣೆಯ ಅಭ್ಯರ್ಥಿಯನ್ನು ಯೋಗಿ ಆಶಯಕ್ಕೆ ವಿರುದ್ಧವಾಗಿ ಅಮಿತ್ ಶಾ ಆಯ್ಕೆ ಮಾಡಿದ್ದಾರೆ.

ಗೋರಖ್’ಪುರ : ಬಿಜೆಪಿಯಿಂದ ಇದೀಗ ದೊಡ್ಡ ಮಾಹಿತಿಯೊಂದು ಹೊರಬಿದ್ದಿದೆ. ಇದರಲ್ಲಿ  ಮುಂದಿನ ಬಾರಿ ಗೋರಖ್’ಪುರದಲ್ಲಿ ನಡೆಯಲಿರುವ ಲೋಕಸಭಾ ಉಪಚುನಾವಣೆಯ ಅಭ್ಯರ್ಥಿಯನ್ನು ಯೋಗಿ ಆಶಯಕ್ಕೆ ವಿರುದ್ಧವಾಗಿ ಅಮಿತ್ ಶಾ ಆಯ್ಕೆ ಮಾಡಿದ್ದಾರೆ.

ಇಲ್ಲಿನ ಸಂಸದರಾಗಿದ್ದ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಹಿನ್ನೆಲೆಯಲ್ಲಿ ಅವರು ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಸಲಾಗುತ್ತಿದೆ.

ಇಲ್ಲಿ ನಡೆಯುವ ಚುನಾವಣೆಗೆ ಮೊದಲ ಬಾರಿಗೆ ಅರ್ಚಕರಲ್ಲದ ಅಭ್ಯರ್ಥಿಯನ್ನು ನಿಲ್ಲಿಸಲು ಬಿಜೆಪಿ ತೀರ್ಮಾನ ಮಾಡಿದೆ. ಬಿಜೆಪಿ ಚುನಾವಣಾ ಅಭ್ಯರ್ಥಿಯಾಗಿ ಉಪೇಂದ್ರ ಶುಕ್ಲಾ ಅವರನ್ನು ಆಯ್ಕೆ ಮಾಡಲಾಗಿದ್ದು, ಇದರಿಂದ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದ್ದ ಅಲಿಖಿತ ನಿಯಮವೊಂದು ಮುರಿದು ಬಿದ್ದಂತಾಗಿದೆ.

ಕಳೆದ ಫೆ.14ರಂದು ನಡೆದ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದ್ದು, ಮಾರ್ಚ್ 11 ರಂದು  ಇಲ್ಲಿ ಚುನಾವಣೆ ನಡೆಯಲಿದೆ.

loader