ಇನ್ನೇನು ಕೆಲವೇ ದಿನಗಳಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು ತೆಲಂಗಾಣದಲ್ಲಿ ಬಿಜೆಪಿ ಅರಳುವುದು ಖಚಿತ ಎಂದು ಕೇಂದ್ರ ಮಾಜಿ ಸಚಿವ ಪ್ರಮೋದ್ ಮಹಾಜನ್ ಪುತ್ರಿ ಪೂನಮ್ ಮಹಾಜನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಹೈದ್ರಾಬಾದ್ :  ತಾವು ತೆಲಂಗಾಣದ ಮಗಳು ಎಂದು ಭಾರತೀಯ ಜನತಾ ಯುವ ಮೋರ್ಚಾ ಅಧ್ಯಕ್ಷೆ ಪೂನಮ್ ಮಹಾಜನ್ ಹೇಳಿದ್ದಾರೆ. ಡಿಸೆಂಬರ್ 11 ರಂದು ತೆಲಂಗಾಣದ ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು, ಇಲ್ಲಿ ಕಮಲ ಅರಳಲಿದೆ ಎಂದು ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೂನಮ್ ಮಹಾಜನ್ ಮಾಜಿ ಕೆಂದ್ರ ಸಚಿವ ಪ್ರಮೋದ್ ಮಹಾಜನ್ ಅವರ ಪುತ್ರಿಯಾಗಿದ್ದು, ಮಹಾಜನ್ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 

ತೆಲಂಗಾಣದ ಮಹಬುನಗರದಲ್ಲಿ ಪ್ರಮೋದ್ ಮಹಾಜನ್ ಅವರು ಜನಿಸಿದ್ದು, ತಾವೂ ತೆಲಂಗಾಣದ ಮಗಳು, ಆಂಧ್ರ ಪ್ರದೇಶದ ಸೊಸೆ ಎಂದು ಹೇಳಿದ್ದಾರೆ. 

ಹೈದ್ರಾಬಾದ್ ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ಈ ವಿಚಾರವನ್ನು ತಿಳಿಸಿದ್ದಾರೆ. 

ಇನ್ನು ಯುವ ಮೋರ್ಚಾ ಎನ್ನುವುದು ಸೇತುವೆಯಂತೆ ಕೆಲಸ ಮಾಡುತ್ತದೆ. ನರೇಂದ್ರ ಮೋದಿ ಅವರಂತಹ ಪ್ರಧಾನಿಯನ್ನು ಪಡೆದಿರುವುದು ಅದೃಷ್ಟ ಎಂದು ಅವರು ಹೇಳಿದ್ದಾರೆ. 

ಡಿಸೆಂಬರ್ 7 ರಂದು ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, 11 ರಂದು ಫಲಿತಾಂಶ ಪ್ರಕಟವಾಗಲಿದೆ.