ಆ ಬ್ಯಾನರ್'ಗಳಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪ ಭಾವಚಿತ್ರ ಒಟ್ಟಿಗೆ ಪ್ರಕಟಿಸಿ ಕಾರ್ಯಕರ್ತರು, ಮತದಾರರ ಮನಸ್ಸು ಅರಿಯಿರಿ ಎಂದು ಉಭಯ ನಾಯಕರಿಗೆ ಸಂದೇಶ ನೀಡಿದ್ದಾರೆ.
ಮೈಸೂರು (ಮೇ.07): ಬಿ.ಎಸ್. ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ನಡುವೆ ಭಿನ್ನಮತ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ, ಕಾರ್ಯಕರ್ತರೇ ಬಿಜೆಪಿ ನಾಯಕರಿಗೆ ಬ್ಯಾನರ್'ಗಳ ಮೂಲಕ ಬುದ್ದಿಮಾತುಹೇಳಿದ್ದಾರೆ.
ಮೈಸೂರಿನಲ್ಲಿ ಇಂದು ಬಿಜೆಪಿ ಕಾರ್ಯಕಾರಿಣಿ ನಡೆಯಲಿದ್ದು, ಬೀದಿಬೀದಿಗಳಲ್ಲಿ ಬಿಜೆಪಿ ಮತದಾರರ ವೇದಿಕೆಯಿಂದ ಬ್ಯಾನರ್, ಕಟೌಟ್'ಗಳನ್ನು ಹಾಕಲಾಗಿದೆ.
ಆ ಬ್ಯಾನರ್'ಗಳಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪ ಭಾವಚಿತ್ರ ಒಟ್ಟಿಗೆ ಪ್ರಕಟಿಸಿ ಕಾರ್ಯಕರ್ತರು, ಮತದಾರರ ಮನಸ್ಸು ಅರಿಯಿರಿ ಎಂದು ಉಭಯ ನಾಯಕರಿಗೆ ಸಂದೇಶ ನೀಡಿದ್ದಾರೆ.
ಸಾಧಿಸುವ ಗುರಿ ಹಾಗೂ ಓಡುವ ಛಲವಿರುವಾಗ ಎದೆಯಲ್ಲಿ ಸಂತೋಷವಿದ್ದರೆ ವಿಜಯ ನಿಶ್ಚಿತ, 'ಸಂತೋಷ' ಇರಲಿ ಜಗಳ ಬೇಡ ಎಂಬ ಸಂದೇಶಗಳನ್ನು ಅವುಗಳಲ್ಲಿ ಪ್ರಕಟಿಸಲಾಗಿದೆ.