ಬಿಎಸ್’ವೈ ಮುಗಿಸಲು ಕಾಂಗ್ರೆಸ್ ಮುಖಂಡನ ಜೊತೆ ಬಿಜೆಪಿ ಕಾರ್ಯಕರ್ತನ ಡೀಲ್?

First Published 24, Feb 2018, 2:34 PM IST
BJP Worker Deal To Politically Finish BS Yeddyurappa
Highlights

ಮಾಜಿ ಸಿಎಂ ಯಡಿಯೂರಪ್ಪ ಮಗ್ಗುಲ ಮುಳ್ಳಾದ ಬಿಜೆಪಿ ಕಾರ್ಯಕರ್ತ ವಿನಯ್​, ಕಾಂಗ್ರೆಸ್ ಮುಖಂಡನ ಜೊತೆ ‘ಡೀಲ್​’ ಮಾತುಕತೆ ನಡೆಸಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ಬಹಿರಂಗವಾಗಿದೆ.

ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಮಗ್ಗುಲ ಮುಳ್ಳಾದ ಬಿಜೆಪಿ ಕಾರ್ಯಕರ್ತ ವಿನಯ್​, ಕಾಂಗ್ರೆಸ್ ಮುಖಂಡನ ಜೊತೆ ‘ಡೀಲ್​’ ಮಾತುಕತೆ ನಡೆಸಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ಬಹಿರಂಗವಾಗಿದೆ.

ಕಾಂಗ್ರೆಸ್’​​​ನವರು ಫಂಡ್ ಮಾಡಿದ್ರೆ ಬಿಎಸ್’ವೈ ಮುಗಿಸುತ್ತೇನೆ. ಸಿನೆಮಾ ಮಾಡಿ ಅವರು ತಲೆ ಎತ್ತದ ಹಾಗೆ ಮಾಡ್ತೀನಿ ಎಂದು ವಿನಯ್ ಆ ಕ್ಲಿಪ್’ನಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತನೊಂದಿಗೆ 3 ಕೋಟಿ ಡೀಲ್ ಮಾಡಲು ಯತ್ನಿಸಿದ್ದಾನೆ.

ಪ್ರಕಾಶ್ ರೈ, ಸುಮನ್ ರಂಗನಾಥ್ ಅವರು ಪಾತ್ರಧಾರಿಯಾಗಿರುವ, ತುಂಬಾ ಒಳ್ಳೆಯ ಸ್ಟೋರಿ ಮಾಡಿದ್ದೇನೆ ಎಂದು ಹೇಳಿರುವ ವಿನಯ್, ಚುನಾವಣೆ ವೇಳೆ ಸಿನೆಮಾ ಬಿಡುಗಡೆ ಮಾಡುವುದಾಗಿ, ಆ ಸಿನೆಮಾ ನೋಡಿದರೆ ಜನ ವೋಟೇ ಹಾಕಲ್ಲ ಎಂದು ಹೇಳಿದ್ದಾರೆ.

ಸಿಎಂ ಭೇಟಿಗೆ ಅವಕಾಶ ಮಾಡಿಸಿಕೊಡು ಎಂದು ಕೂಡಾ ವಿನಯ್ ಅದರಲ್ಲಿ ಕೇಳಿಕೊಂಡಿದ್ದಾನೆ.

ಆಡಿಯೋದಲ್ಲಿರುವ ಧ್ವನಿ ಈಶ್ವರಪ್ಪ ಆಪ್ತ ವಿನಯ್ ಕುಮಾರ್’ ಧ್ವನಿಗೆ ಹೋಲುತ್ತಿದ್ದರೂ, ವಿನಯ್ ಅದನ್ನು ನಿರಾಕರಿಸಿದ್ದಾರೆ. ಯಡಿಯೂರಪ್ಪ ನಮ್ಮ ನಾಯಕರು, ಅವರ ವಿರುದ್ಧ ಮಾತನಾಡಲ್ಲವೆಂದು ವಿನಯ್ ಹೇಳಿದ್ದಾರೆ.

 

loader