ತನ್ನ ಏಳಿಗೆ ಸಹಿಸದ ವಿರೋಧಿಗಳು ಇಂತಹ ಪಿತೂರಿ ನಡೆಸಿವೆ ಎಂದು ಇದೇ ವೇಳೆ ಗೀತಾ ಸಿಂಗ್ ದೂರಿದ್ದಾರೆ. ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದಾಗಿ ಗೀತಾ ಸಿಂಗ್ ತಿಳಿಸಿದ್ದಾರೆ.

ಧನಬಾದ್(ಜ. 01): ಜಾರ್ಖಂಡ್'ನ ಪ್ರಮುಖ ಬಿಜೆಪಿ ಮಹಿಳಾ ನಾಯಕಿಯೊಬ್ಬರ ಎಂಎಂಎಸ್ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗೀತಾ ಸಿಂಗ್ ಅವರು ಅಪರಿಚಿತ ವ್ಯಕ್ತಿಯೊಬ್ಬರೊಂದಿಗೆ ಪಲ್ಲಂಗದಾಟದಲ್ಲಿ ತೊಡಗಿರುವ ದೃಶ್ಯ ಈ ಎಂಎಂಎಸ್ ಕ್ಲಿಪ್'ನಲ್ಲಿದೆ. ಗೀತಾ ಸಿಂಗ್ ಅವರು ಕೆಲ ದಿನಗಳ ಹಿಂದಷ್ಟೇ ಧನಬಾದ್ ಜಿಲ್ಲಾ ಮಹಿಳಾ ಘಟಕದ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಸಂದರ್ಭದಲ್ಲಿ ಈ ವಿಡಿಯೋ ಲೀಕ್ ಆಗಿರುವುದು ಗಮನಾರ್ಹ. ಐದು ದಿನಗಳ ಹಿಂದೆ ಈ ವಿಡಿಯೋ ಆನ್'ಲೈನ್'ನಲ್ಲಿ ಅಪ್'ಲೋಡ್ ಆಗಿದೆ.

ತನ್ನ ಏಳಿಗೆ ಸಹಿಸದ ವಿರೋಧಿಗಳು ಇಂತಹ ಪಿತೂರಿ ನಡೆಸಿವೆ ಎಂದು ಇದೇ ವೇಳೆ ಗೀತಾ ಸಿಂಗ್ ದೂರಿದ್ದಾರೆ. ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದಾಗಿ ಗೀತಾ ಸಿಂಗ್ ತಿಳಿಸಿದ್ದಾರೆ.

ಗೀತಾ ಸಿಂಗ್ ಸೆಕ್ಸ್ ವಿಡಿಯೋ ಪ್ರಕರಣದಲ್ಲಿ ಖಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷವು, ಕೇಂದ್ರ ಸರಕಾರ ಮೊದಲು ತನ್ನ ಪಕ್ಷದೊಳಗೆ ಶುದ್ಧೀಕರಣ ಕಾರ್ಯ ನಡೆಸಲಿ ಎಂದು ಆಗ್ರಹಿಸಿದೆ. ಇದೇ ವೇಳೆ, ಬಿಜೆಪಿ ಪಕ್ಷ ಈ ಪ್ರಕರಣದಲ್ಲಿ ಗೀತಾ ಅವರು ತಪ್ಪಿತಸ್ಥೆ ಎಂಬುದು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.