ಬಿಜೆಪಿಗೆ ಬಹುಮತ ಸಾಬೀತು ಪಡಿಸಲು 20 ಮತಗಳ ಅಗತ್ಯವಿತ್ತು. ತಮ್ಮ16 ಮಂದಿ ಶಾಸಕರು ನೂತನ ಮುಖ್ಯಮಂತ್ರಿ ಪರ್ರಿಕರ್ ವಿರುದ್ಧ ಮತ ಚಲಾಯಿಸಿದರೆ, ಓರ್ವ ಶಾಸಕ ಗೈರು ಹಾಜರಾಗಿದ್ದರು.

ಪಣಜಿ (ಮಾ.16): ಇಂದು ವಿಧಾನಸಭೆಯಲ್ಲಿ ನಡೆದ ಬಹುಮತ ಸಾಬೀತು ಕಲಾಪದಲ್ಲಿ 22 ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಮುಂದಿನ 5 ವರ್ಷಗಳ ಅವಧಿಗೆ ಆಡಳಿತದ ಚುಕ್ಕಾಣಿಯನ್ನು ಭದ್ರಪಡಿಸಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಜೆಪಿಗೆ ಬಹುಮತ ಸಾಬೀತು ಪಡಿಸಲು 20 ಮತಗಳ ಅಗತ್ಯವಿತ್ತು. ತಮ್ಮ16 ಮಂದಿ ಶಾಸಕರು ನೂತನ ಮುಖ್ಯಮಂತ್ರಿ ಪರ್ರಿಕರ್ ವಿರುದ್ಧ ಮತ ಚಲಾಯಿಸಿದರೆ, ಓರ್ವ ಶಾಸಕ ಗೈರು ಹಾಜರಾಗಿದ್ದರು.

ಗೋವಾ ಮುಖ್ಯಮಂತ್ರಿ ಗಾದಿಯನ್ನು ಪಡೆಯುವ ಸಲುವಾಗಿ ರಕ್ಷಣಾ ಸಚಿವ ಸ್ಥಾನಕ್ಕೆ ಪರ್ರಿಕರ್ ರಾಜಿನಾಮೆ ನೀಡಿದ್ದರು.

40 ಶಾಸಕರಿರುವ ವಿಧಾನಸಭೆಗೆ ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 13 ಸ್ಥಾನಗಳು ಬಂದಿವೆ. ಗೋವಾ ಫಾರ್ವರ್ಡ್ ಪಕ್ಷ ಹಾಗೂ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷಗಳು ಬಿಜೆಪಿಗೆ ಬೆಂಬಲ ಸೂಚಿಸಿದ್ದವು.