ಮುಂಬೈ, ಮಧ್ಯ ಕರ್ನಾಟಕದಲ್ಲಿ ಪ್ರಬಲವಾಗಿದೆ ಬಿಜೆಪಿ

First Published 7, Dec 2017, 7:44 AM IST
BJP  Win More seats in Mumbai karnataka
Highlights

ವೀರ ಶೈವ- ಲಿಂಗಾಯತ ಸಮುದಾಯದ ಪ್ರಭಾವ ತೀವ್ರವಾಗಿರುವ ಮುಂಬೈ ಕರ್ನಾಟಕ ಹಾಗೂ ಕೇಂದ್ರ ಕರ್ನಾಟಕದ ಜಿಲ್ಲೆಗಳಲ್ಲಿ ಕಾಂಗ್ರೆಸ್ಸಿಗಿಂತಲೂ ಬಿಜೆಪಿ ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಸಂಭವವಿದೆ ಎಂದು ಸಮೀಕ್ಷೆ ತಿಳಿಸಿದೆ.

ಬೆಂಗಳೂರು(ಡಿ.7): ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಪರ- ವಿರೋಧ ಚರ್ಚೆ ತೀವ್ರಗೊಂಡಿರುವಾಗಲೇ ‘ಎಝಡ್ ರೀಸರ್ಚ್’ ಸಂಸ್ಥೆ ಜತೆಗೂಡಿ ಕನ್ನಡಪ್ರಭ- ಸುವರ್ಣ ನ್ಯೂಸ್ ನಡೆಸಿರುವ ಸಮೀಕ್ಷೆಯಲ್ಲಿ ಕುತೂಹಲಕಾರಿ ಅಂಶ ವ್ಯಕ್ತವಾಗಿದೆ. ವೀರ ಶೈವ- ಲಿಂಗಾಯತ ಸಮುದಾಯದ ಪ್ರಭಾವ ತೀವ್ರವಾಗಿರುವ ಮುಂಬೈ ಕರ್ನಾಟಕ ಹಾಗೂ ಕೇಂದ್ರ ಕರ್ನಾಟಕದ ಜಿಲ್ಲೆಗಳಲ್ಲಿ ಕಾಂಗ್ರೆಸ್ಸಿಗಿಂತಲೂ ಬಿಜೆಪಿ ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಸಂಭವವಿದೆ ಎಂದು ಸಮೀಕ್ಷೆ ತಿಳಿಸಿದೆ.

ಹೈದರಾಬಾದ್ ಕರ್ನಾಟಕ ಹಾಗೂ ಕರಾವಳಿ ಕರ್ನಾಟಕದ ಸಮೀಕ್ಷೆಯ ಅಂಶಗಳನ್ನು ಕನ್ನಡಪ್ರಭ- ಸುವರ್ಣನ್ಯೂಸ್ ಮೊದಲ ಭಾಗದಲ್ಲಿ ಪ್ರಕಟಿಸಿದ್ದವು. ಹೈ-ಕ ಭಾಗದಲ್ಲಿ ಕಳೆದ ಬಾರಿ ಗೆದ್ದಿದ್ದಕ್ಕಿಂತ ಒಂದು ಸ್ಥಾನ ಹೆಚ್ಚು ಗಳಿಸುವ ಮೂಲಕ ಕಾಂಗ್ರೆಸ್ ಪ್ರಾಬಲ್ಯ ಮೆರೆಯಲಿದೆ, ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ಪರ ಬಿರುಗಾಳಿ ಇದೆ ಎಂಬ ಸೂಚನೆ ಕಂಡುಬಂದಿತ್ತು.

ಸಮೀಕ್ಷೆಯ 2ನೇ ಭಾಗದಲ್ಲಿ ಮುಂಬೈ ಕರ್ನಾಟಕ ಹಾಗೂ ಕೇಂದ್ರ ಕರ್ನಾಟಕ ಕೇಂದ್ರಿತ ಫಲಿತಾಂಶ ಬಿತ್ತರಿಸಲಾಗಿದೆ.

loader