ಉತ್ತರ ಪ್ರದೇಶ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಟೈಮ್ಸ್ ನೌ ಸಮೀಕ್ಷೆ ಹೇಳಿದೆ.

ನವದೆಹಲಿ (ಜ.30): ಉತ್ತರ ಪ್ರದೇಶ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಟೈಮ್ಸ್ ನೌ ಸಮೀಕ್ಷೆ ಹೇಳಿದೆ.

ಈ ಸಮೀಕ್ಷೆಯ ಪ್ರಕಾರ 403 ವಿಧಾನ ಸಭಾ ಸ್ಥಾನದಲ್ಲಿ ಬಿಜೆಪಿ ಶೇ. 34 ರಷ್ಟು ಮತಹಂಚಿಕೆಯೊಂದಿಗೆ 202 ಸ್ಥಾನಗಳನ್ನು ಗೆಲ್ಲಲಿದೆ. ಸಮಾಜವಾದಿ ಪಕ್ಷ-ಕಾಂಗ್ರೆಸ್ ಮೈತ್ರಿ ಶೇ.31 ರಷ್ಟು ಮತ ಹಂಚಿಕೆಯೊಂದಿಗೆ 147 ಸ್ಥಾನಗಳನ್ನು ಗೆಲ್ಲಲಿದೆ. ಮಾಯಾವತಿಯವರ ಬಿಎಸ್ಪಿ ಪಕ್ಷ ಶೇ.24 ರಷ್ಟು ಮತಹಂಚಿಕೆಯೊಂದಿಗೆ 47 ಸ್ಥಾನಗಳನ್ನು ಗೆಲ್ಲಲಿದೆ. ಅಜಿತ್ ಸಿಂಗ್ ರವರ ರಾಷ್ಟ್ರೀಯ ಲೋಕದಳ ಶೇ. 11 ರಷ್ಟು ಮತಹಂಚಿಕೆಯೊಂದಿಗೆ 7 ಸ್ಥಾನಗಳನ್ನು ಗೆಲ್ಲಲಿದೆ.

ನರೇಂದ್ರ ಮೋದಿಯವರ ನೋಟು ಅಮಾನ್ಯದಿಂದ ಬೇಸತ್ತ ಮತದಾರ ಈ ಬಾರಿ ಬಿಜೆಪಿ ಗೆ ಕೈ ಕೊಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಮತದಾರ ಪ್ರಭುಗಳು ಇದು ದೇಶಕ್ಕೆ ಒಳ್ಳೆಯ ನಡೆ ಎಂದಿದ್ದಾರೆ. ಶೇ. 63.4 ರಷ್ಟು ಮಂದಿ ಮೋದಿ ಪರವಾಗಿದ್ದಾರೆ ಎನ್ನಲಾಗಿದೆ. ಈ ಬಾರಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಮೋದಿ ಮೋಡಿಯಿಂದ ಕಮಲ ಅರಳುವುದು ಬಹುತೇಕ ಖಚಿತವಾಗಿದೆ.