Asianet Suvarna News Asianet Suvarna News

‘ಬಿಜೆಪಿಗೆ ರಾಜಸ್ಥಾನದಲ್ಲಿ ವಿಪಕ್ಷ ಸ್ಥಾನ ಖಚಿತ’

ದೇಶದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪಂಚರಾಜ್ಯಗಳಲ್ಲಿ ಇನ್ನೆರಡು ದಿನದಲ್ಲಿ ಚುನಾವಣೆ ಮುಕ್ತಾಯವಾಗಿ ಡಿಸೆಂಬರ್ 11 ರಂದು ಫಲಿತಾಂಶ ಪ್ರಕಟವಾಗಲಿದೆ. ಇದೇ ವೇಳೆ ರಾಜಸ್ಥಾನದಲ್ಲಿ ಸದ್ಯ ಆಡಳಿತ ಪಕ್ಷವಾಗಿರುವ ಬಿಜೆಪಿ ವಿಪಕ್ಷ ಸ್ಥಾನದಲ್ಲಿ ಉಳಿಯಲಿದೆ ಎಂದು ಪಾಟೀದಾರ್ ಮುಖ್ಯಸ್ಥ ಹಾರ್ದಿಕ್ ಪಟೇಲ್ ಹೇಳಿದ್ದಾರೆ.

BJP Will Be An Opposition Party After Rajasthan Elections Says Hardik Patel
Author
Bengaluru, First Published Dec 4, 2018, 12:20 PM IST

ಉದಯ್ ಪುರ :  ದೇಶದ ಪಂಚರಾಜ್ಯಗಳಲ್ಲಿ ಚುನಾವಣೆ ಕಾವು ಹೆಚ್ಚಾಗಿದೆ. ವಿವಿಧ ಪಕ್ಷಗಳು ಅಧಿಕಾರ ಪಡೆಯಲು ಸತತ ಯತ್ನದಲ್ಲಿವೆ. 

ಗುಜರಾತ್ ನಲ್ಲಿಯೂ ಕೂಡ ಡಿಸೆಂಬರ್  7 ರಂದು ಚುನಾವಣೆ ನಡೆಯುತ್ತಿದ್ದು, ಇಲ್ಲಿ ಸದ್ಯ ಆಡಳಿತ ಪಕ್ಷವಾಗಿರುವ ಬಿಜೆಪಿ ವಿಪಕ್ಷವಾಗುವುದು ಖಚಿತ ಎಂದು ಪಾಟೀದಾರ್ ಸಮುದಾಯದ ಮುಖ್ಯಸ್ಥ ಹಾರ್ದಿಕ್ ಪಾಟೀಲ್ ಹೇಳಿದ್ದಾರೆ.

ಉದಯ್ ಪುರಕ್ಕೆ ಭೇಟಿ ನೀಡಿದ ವೇಳೆ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಹಾರ್ದಿಕ್ ಪಟೇಲ್,  ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಉದ್ಯೋಗ ನೀಡುವ ಭರವಸೆ ನೀಡಿ, ನಿರೋದ್ಯೋಗ ಸೃಷ್ಟಿಸುತ್ತಿದೆ. ರಾಜ್ಯದಲ್ಲಿ ಇದುವರೆಗೂ ಯಾವುದೇ ರೀತಿಯ ಉದ್ಯೋಗ ಸೃಷ್ಟಿಯೂ ಆಗಲಿಲ್ಲ. ಆದ್ದರಿಂದ ರಾಜಸ್ಥಾನದಲ್ಲಿ ಜನತೆ ಸರ್ಕಾರವನ್ನು ಬದಲಾಯಿಸುವ ಮನಸ್ಸು ಮಾಡಿದ್ದಾರೆ ಎಂದು ಹೇಳಿದ್ದಾರೆ. 

ಬಿಜೆಪಿಗೆ ಸೂಕ್ತ ಸ್ಥಾನ ವಿರೋಧ ಪಕ್ಷವಾಗಿ ಕೂರುವುದೇ ಆಗಿದೆ. ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ವಿಪಕ್ಷವಾಗಿಯೇ ಆಯ್ಕೆ ಮಾಡಲಿದ್ದಾರೆ ಎಂದು ಹಾರ್ದಿಕ್ ಪಟೇಲ್ ಭವಿಷ್ಯ ನುಡಿದಿದ್ದಾರೆ.  

ಕೇಂದ್ರ ಹಾಗೂ ರಾಜ್ಯ ಎರಡೂ ಕಡೆಯೂ ಕೂಡ ಬಿಜೆಪಿ ಸರ್ಕಾರವಿದ್ದರೂ ಅಭಿವೃದ್ಧಿ ಕಾರ್ಯಗಳು ಮಾತ್ರ ನಗಣ್ಯವಾಗಿವೆ. ಇಂತಹ ಸರ್ಕಾರವನ್ನು ಅಧಿಕಾರದಿಂದ  ಇಳಿಸಿ ವಿಪಕ್ಷ ಸ್ಥಾನದಲ್ಲಿ ಕೂರಿಸಲು ಜನತೆ ಬಯಸುತ್ತಿದ್ದಾರೆ. ಹೆಚ್ಚಿನ ಜನರ ಅಭಿಪ್ರಾಯವೂ ಕೂಡ ಇದೇ ಆಗಿದೆ ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ. 

ರಾಜಸ್ಥಾನದಲ್ಲಿ ಡಿಸೆಂಬರ್ 7 ರಂದು ಚುನಾವಣೆ ಮುಕ್ತಾಯವಾಗಲಿದ್ದು, 11 ರಂದು ಫಲಿತಾಂಶ ಪ್ರಕಟವಾಗಲಿದೆ.

Follow Us:
Download App:
  • android
  • ios