Asianet Suvarna News Asianet Suvarna News

ಅಪನಗದೀಕರಣಕ್ಕೆ1ವರ್ಷ: ವಿಪಕ್ಷಗಳ ‘ಕರಾಳ ದಿನ’ಕ್ಕೆ ಬಿಜೆಪಿ ಪ್ರತಿತಂತ್ರ

ಕೇಂದ್ರ ಸರ್ಕಾರ ಅಪನಗದೀಕರಣದ ಘೋಷಿಸಿದ ಮೊದಲ ವಾರ್ಷಿಕೋತ್ಸವದ ದಿನವಾದ ನವೆಂಬರ್ 8 ಅನ್ನು ಕರಾಳ ದಿನ ಆಗಿ ಆಚರಿಸಿ, ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸಲು ವಿಪಕ್ಷಗಳು ನಿರ್ಧರಿಸಿವೆ.

BJP To Observe Anti Black Money Day on Nov 8
  • Facebook
  • Twitter
  • Whatsapp

ನವದೆಹಲಿ: ಕೇಂದ್ರ ಸರ್ಕಾರ ಅಪನಗದೀಕರಣದ ಘೋಷಿಸಿದ ಮೊದಲ ವಾರ್ಷಿಕೋತ್ಸವದ ದಿನವಾದ ನವೆಂಬರ್ 8 ಅನ್ನು ಕರಾಳ ದಿನ ಆಗಿ ಆಚರಿಸಿ, ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸಲು ವಿಪಕ್ಷಗಳು ನಿರ್ಧರಿಸಿವೆ.

ಇನ್ನೊಂದೆಡೆ, ನ.08ನ್ನು ಕಪ್ಪು-ಹಣ ವಿರೋಧಿ ದಿನ (Anti Black Money Day)ಯಾಗಿ ಆಚರಿಸುವುದಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಕಳೆದ ವರ್ಷ ನ.8ರಂದು ಕೇಂದ್ರ ಸರ್ಕಾರವು ₹500 ಹಾಗೂ ₹1000 ನೋಟುಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಬಳಿಕ ಹೊಸ ₹500 ಹಾಗೂ ₹2000 ನೋಟುಗಳನ್ನು ಚಲಾವಣೆಗೆ ಬಿಡಲಾಗಿತ್ತು.

ನೋಟು ಅಮಾನ್ಯ ಕ್ರಮದಿಂದಾಗಿ, ತಮ್ಮ ಹಳೇ ನೋಟುಗಳನ್ನು ಬದಲಾಯಿಸಿಕೊಳ್ಳಲು ಸಾರ್ವಜನಿಕರು ಪರದಾಡಬೇಕಾಯಿತಲ್ಲದೇ, ಆಕ್ರೋಶ ಕೂಡಾ ವ್ಯಕ್ತವಾಗಿತ್ತು. ದೊಡ್ಡ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡುವುದರಿಂದ ಕಪ್ಪುಹಣಕ್ಕೆ ಕಡಿವಾಣ ಬೀಳುತ್ತದೆ ಎಂದು ಸರ್ಕಾರ ಹೇಳಿತ್ತು.

ಆದರೆ  ಮಾನಿಟೈಸೇಶನ್ ನಂತರ ಶೇ.99ರಷ್ಟು ಹಳೆ ನೋಟುಗಳು ಬ್ಯಾಂಕುಗಳಿಗೆ ವಾಪಸು​ ಬಂದಿದೆ ಎಂದು ಆರ್’ಬಿಐ ನೋಟ್​ ಬ್ಯಾನ್​ ಕುರಿತ ವರದಿಯಲ್ಲಿ ಹೇಳಿತ್ತು.   

ನೋಟು ಅಮಾನ್ಯದ ಬಳಿಕ  ಶೇ. 99ರಷ್ಟು ಹಳೆ ನೋಟು ಬ್ಯಾಂಕ್​ಗಳಿಗೆ ಸಂದಾಯವಾಗಿದೆ. ಒಟ್ಟು 15.44 ಲಕ್ಷ ಕೋಟಿಯಲ್ಲಿ 15.28 ಲಕ್ಷ ಕೋಟಿ ಹಣ ವಾಪಸ್ ಬಂದಿದೆ. ಎಂದು ವರದಿ ಹೇಳಿತ್ತು.

Follow Us:
Download App:
  • android
  • ios