ನವದೆಹಲಿ[ಫೆ.02]: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ಟನ್ನು ಟೀಕಿಸಲು ಹೋಗಿ ಕಾಂಗ್ರೆಸ್‌ ಪಕ್ಷ ಎಡವಟ್ಟು ಮಾಡಿಕೊಂಡಿದೆ. ಬಜೆಟ್‌ನ ನಂತರ ಟ್ವೀಟ್‌ ಮಾಡಿದ ಕಾಂಗ್ರೆಸ್‌, ‘ರೈತರಿಗೆ ನೀಡಿದ್ದ ಯಾವುದೇ ಭರವಸೆ ಈಡೇರಿಸುವಲ್ಲಿ ವಿಫಲವಾದ ಮೋದಿ ಸರ್ಕಾರ ಈಗ ಇನ್ನೊಂದು ಸುಳ್ಳು ಭರವಸೆಯೊಂದಿಗೆ ರೈತರಿಗೆ ಅವಮಾನ ಮಾಡಿದೆ’ ಎಂದು ಹೇಳಿದೆ.

ಅದರ ಕೆಳಗೊಂದು ಲೆಕ್ಕಾಚಾರದ ಗ್ರಾಫಿಕ್ಸ್‌ ಹಾಕಿ, ‘ಭರವಸೆ - ವರ್ಷಕ್ಕೆ 6000 ರು.’ ‘ವಾಸ್ತವ - ರೈತನಿಗೆ ತಿಂಗಳಿಗೆ ಸಿಗುವುದು 500 ರು.’ ಎಂದು ಬರೆದಿದೆ.

ಆದರೆ, ವರ್ಷಕ್ಕೆ 6000 ರು. ನೀಡಿದರೆ ತಿಂಗಳಿಗೆ ಸಿಗುವುದು 500 ರುಪಾಯಿಯೇ. ಲೆಕ್ಕಾಚಾರ ಸರಿಯಾಗಿಯೇ ಇದೆ. ಇದರಲ್ಲಿ ತಪ್ಪೇನು ಎಂದು ಟ್ವೀಟಿಗರು ಕಾಂಗ್ರೆಸ್‌ನ ಕಾಲೆಳೆದಿದ್ದಾರೆ.

ಬಿಜೆಪಿ ಕೂಡಾ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು, 'ರಾಹುಲ್ ಗಾಂಧಿ IQ ಲೆವೆಲ್ 0, ನೀವು ಪಿಎಂ ಆಗಿದ್ದೀರಿ, ಪುವರ್ ಇನ್ ಮ್ಯಾಥಮ್ಯಾಟಿಕ್ಸ್' ಎಂದು ರಾಹುಲ್ ಗಾಂಧಿಯ ಕಾಲೆಳೆದಿದೆ.