ಜನತೆ ನೋಟು ಅಮಾನ್ಯವನ್ನು ಒಪ್ಪಿ ಮತ ಚಲಾಯಿಸಿದ್ದಾರೆ ಎಂಬುದನ್ನು ಈ ಫಲಿತಾಂಶ ಸೂಚಿಸುತ್ತದೆ ಎಂದು ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಬಣ್ಣಿಸಿದ್ದಾರೆ.

ಚಂಢೀಗಡ(ಡಿ.20): ಪಂಜಾಬ್‌'ನ ರಾಜಧಾನಿ ಚಂಢೀಗಡದ ಮುನ್ಸಿಪಲ್ ಚುನಾವಣೆಯಲ್ಲಿ ಆಡಳಿತ ಪಕ್ಷಗಳಾದ ಬಿಜೆಪಿ ಮತ್ತು ಅಕಾಲಿದಳ ಸಮ್ಮಿಶ್ರ ಕೂಟವು ಭಾರೀ ಅಂತರದಲ್ಲಿ ಜಯಗಳಿಸಿದೆ.

ಈ ಫಲಿತಾಂಶವು ಮುಂಬರಲಿರುವ ವಿಧಾನಸಭೆ ಚುನಾವಣೆ ದಿಕ್ಸೂಚಿ ಎಂದೇ ಭಾವಿಸಲಾಗುತ್ತಿದೆ. ಮುನ್ಸಿಪಲ್ ಚುನಾವಣೆಯಲ್ಲಿ ಮೈತ್ರಿ ಸರ್ಕಾರದ 26 ಸ್ಥಾನಗಳ ಪೈಕಿ 21 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್‌'ನ ನಾಲ್ಕು ಹಾಗೂ ಒಬ್ಬ ಸ್ವತಂತ್ರ ಅಭ್ಯರ್ಥಿ ಉಳಿದ ಸ್ಥಾನವನ್ನು ಪಡೆದಿದ್ದಾರೆ.

ಜನತೆ ನೋಟು ಅಮಾನ್ಯವನ್ನು ಒಪ್ಪಿ ಮತ ಚಲಾಯಿಸಿದ್ದಾರೆ ಎಂಬುದನ್ನು ಈ ಫಲಿತಾಂಶ ಸೂಚಿಸುತ್ತದೆ ಎಂದು ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಬಣ್ಣಿಸಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಸತತವಾಗಿ ಆಡಳಿತ ನಡೆಸುತ್ತಿರುವ ಸಮ್ಮಿಶ್ರ ಸರ್ಕಾರದ ಆಡಳಿತ ವಿರೋಧಿ ಅಲೆಯ ಹೊರತಾಗಿಯೂ ಆಡಳಿತ ಪಕ್ಷಕ್ಕೆ ಈ ಗೆಲುವು ಮತ್ತಷ್ಟು ಬೆಂಬಲ ಚೇತರಿಕೆ ನೀ