ಕಾರ್ಯಕಾರಿಣಿಯಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪ ವೇದಿಕೆ ಮೇಲೆ ಕುಳಿತಿದ್ದರು. ಆದರೆ ಈಶ್ವರಪ್ಪ ವೇದಿಕೆ ಮೇಲೆ ಎಲ್ಲ ನಾಯಕರನ್ನೂ ಕೈ ಮುಗಿಯುತ್ತಾ ತಮ್ಮ ಆಸನಕ್ಕೆ ಬಂದರು. ಈ ವೇಳೆ ಮಧ್ಯದಲ್ಲಿ ಯಡಿಯೂರಪ್ಪ ಕೂಡಾ ಇದ್ದರು. ಯಡಿಯೂರಪ್ಪಗೂ ಈಶ್ವರಪ್ಪ ಕೈ ಮುಗಿದರು, ಆದರೆ ಯಡಿಯೂರಪ್ಪ ಯಾವುದೋ ಪೇಪರ್​ ನೋಡುತ್ತಾ ಕುಳಿತಿದ್ರು. ತಲೆ ಮೇಲೆ ಎತ್ತಲಿಲ್ಲ. ಹಾಗೇ ಕೈ ಮುಗಿದ ಈಶ್ವರಪ್ಪ ಮುಂದಕ್ಕೆ ಹೋದ್ರು.

ಮೈಸೂರು (ಮೇ.06): ಬಿ.ಎಸ್​. ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನಡುವಿನ ಶೀತಲ ಸಮರ ಮೈಸೂರು ಕಾರ್ಯಕಾರಿಣಿಯಲ್ಲಿ ಬಹಿರಂಗಗೊಂಡಿದೆ. ಹಿಂದಿನ ಕಾರ್ಯಕಾರಣಿಯಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಸಂತೋಷ್ ಈ ಬಾರಿ ಗೈರುಹಾಜರಾಗಿದ್ದರೆ, ಕೆ.ಎಸ್. ಈಶ್ವರಪ್ಪ ಭಾಗವಹಿಸಿದ್ದಾರೆ.

ಬಂಡಾಯದ ಮಧ್ಯೆ ಮೈಸೂರಲ್ಲಿ ಇಂದು 20-ದಿನಗಳ ಬಿಜೆಪಿ ಕಾರ್ಯಕಾರಿಣಿ ಆರಂಭವಾಗಿದ್ದು, ಸಭೆಗೆ ಭಾನುಪ್ರಕಾಶ್ ಹಾಗೂ ನಿರ್ಮಲ್ ಕುಮಾರ್ ಸುರಾನಾ ಗೈರುಹಾಜರಾಗಿದ್ದಾರೆ.

ಅಪಸ್ವರ ಎತ್ತದಂತೆ ಬಂಡಾಯ ನಾಯಕರಿಗೆ ಸೂಚನೆ ನೀಡಿದ್ದೇನೆ, ಏನೇ ಅಸಮಾಧಾನ ಇದ್ದರೂ ನನ್ನ ಜತೆ ಮಾತಾಡಲಿ, ಎಂದು ಮೈಸೂರಿನಲ್ಲಿ ಸುವರ್ಣ ನ್ಯೂಸ್​ಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ. ಈ ಸಂದರ್ಭದಲ್ಲಿ ಈಶ್ವರಪ್ಪ ಬಣಕ್ಕೆ ಮತ್ತೆ ಎಚ್ಚರಿಕೆ ಕೊಟ್ಟ ಯಡಿಯೂರಪ್ಪ, ಯಾರೊಬ್ಬರೂ ಒಂದೇ ಒಂದು ಒಡಕಿನ ಶಬ್ದ ಮಾತಾಡಬಾರದು ಎಂದಿದ್ದಾರೆ.

ಈಶ್ವರಪ್ಪ ಕೈ ಮುಗಿದ್ರೂ, ಬಿಎಸ್​ವೈ ನೋ ರಿಯಾಕ್ಷನ್​:

ಮೈಸೂರಿನ ಬಿಜೆಪಿ ಕಾರ್ಯಕಾರಿಣಿಯಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪ ವೇದಿಕೆ ಮೇಲೆ ಕುಳಿತಿದ್ದರು. ಆದರೆ ಈಶ್ವರಪ್ಪ ವೇದಿಕೆ ಮೇಲೆ ಎಲ್ಲ ನಾಯಕರನ್ನೂ ಕೈ ಮುಗಿಯುತ್ತಾ ತಮ್ಮ ಆಸನಕ್ಕೆ ಬಂದರು. ಈ ವೇಳೆ ಮಧ್ಯದಲ್ಲಿ ಯಡಿಯೂರಪ್ಪ ಕೂಡಾ ಇದ್ದರು. ಯಡಿಯೂರಪ್ಪಗೂ ಈಶ್ವರಪ್ಪ ಕೈ ಮುಗಿದರು, ಆದರೆ ಯಡಿಯೂರಪ್ಪ ಯಾವುದೋ ಪೇಪರ್​ ನೋಡುತ್ತಾ ಕುಳಿತಿದ್ರು. ತಲೆ ಮೇಲೆ ಎತ್ತಲಿಲ್ಲ. ಹಾಗೇ ಕೈ ಮುಗಿದ ಈಶ್ವರಪ್ಪ ಮುಂದಕ್ಕೆ ಹೋದ್ರು.