ಗೌರಿ ಹತ್ಯೆಯಲ್ಲಿ ನವೀನ್ ವಿಚಾರಣೆ: ನಮ್ಮ ಯಾವ ಕಾರ್ಯಕರ್ತರಿಗೆ ತೊಂದರೆ ಆದ್ರೂ ಎದ್ದು ನಿಲ್ತೀವಿ: ಮುತಾಲಿಕ್

BJP Stage3d  Protest in Mourya Circle
Highlights

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ  ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಸಿಲುಕಿಸುವುದರ ವಿರುದ್ಧ ಪ್ರತಿಭಟನೆ  ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಬಿಜೆಪಿ ಪ್ರತಿಭಟನೆ ನಡೆಸಿದೆ. 

ಬೆಂಗಳೂರು (ಮಾ. 09): ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ  ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಸಿಲುಕಿಸುವುದರ ವಿರುದ್ಧ  ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಬಿಜೆಪಿ ಪ್ರತಿಭಟನೆ ನಡೆಸಿದೆ. 

ರಾಜ್ಯ ಸರ್ಕಾರ ಗೌರಿ ಲಂಕೇಶ್ ಹತ್ಯೆಯನ್ನು ಬಗೆ ಹರಿಸಲು ಅಮಾಯಕರನ್ನ ಸಿಲುಕಿಸುತ್ತಿದೆ. ಹಿಂದೂ ಯುವ ಸೇನೆಯ ನವೀನ್ ಕುಮಾರ್ ಮದ್ದೂರು ಇವರನ್ನು ಸಿಲುಕಿಸಲು ವ್ಯವಸ್ಥಿತ ಪಿತೂರಿ ನಡೆಸಿದೆ. ಈ ಷಡ್ಯಂತ್ರ್ಯದ ವಿರುದ್ಧ  ಹಿಂದೂ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸುತ್ತಿದ್ದೇವೆ.  ಕುಟುಂಬಕ್ಕೆ ತಿಳಿಸದೆ ಬಂಧಿಸಿದ್ದಾರೆ. ಇದು ಹಿಂದು ಧಾರ್ಮಿಕ ತೇಜೋವಧೆ ಎಂದು ಬಿಜೆಪಿ ಆರೋಪಿಸಿದೆ. 

ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.  ಇವರ ಜೊತೆ ವಿವಿಧ ಹಿಂದೂಪರ ಸಂಘಟನೆಗಳು ಭಾಗಿಯಾಗಿವೆ. 

ಪೊಲೀಸ್ ಡಿಪಾರ್ಟ್’ಮೆಂಟ್’ಗೆ ನಾಚಿಕೆ ಆಗಬೇಕು.   ಹಿಂದೂ ಯುವ ಸೇನೆ ಎದ್ದು ನಿಂತ್ರೆ ನೀವು ಎಲ್ಲಿ ಹೋಗ್ತೀರಿ ಅಂತ ಯೋಚನೆ ಮಾಡ್ಬೇಕಾಗುತ್ತೆ.   ಹಿಂದೂ ಜನಜಾಗೃತಿ, ಶ್ರೀರಾಮ ಸೇನೆ ಎದ್ದು ನಿಂತಿದೆ.  ಭಜರಂಗದಳ ಆಗಿರಲಿ, ವಿಎಚ್ ಪಿ ಆಗಿರಲಿ ಯಾವುದೇ ಹಿಂದೂ ಕಾರ್ಯಕರ್ತನಿಗೆ ತೊಂದರೆ ಆದ್ರೂ ಎದ್ದು ನಿಲ್ತೇವೆ ಎಂದು ಮುತಾಲಿಕ್ ಹೇಳಿದ್ದಾರೆ.  

loader