ರಾಜ್ಯಸಭಾ ಚುನಾವಣೆಯಲ್ಲಿ ಉತ್ತರಾಖಂಡದಿಂದ ಅನಿಲ್  ಬಲೂನಿ ಎಂಬ ಬಿಜೆಪಿ ಮೀಡಿಯಾ ಪ್ರಭಾರಿ ಬಿಜೆಪಿ ಟಿಕೆಟ್ ಪಡೆದದ್ದು ಭಾರೀ ಚರ್ಚೆಯ ವಿಷಯ. ರಾಮ್ ಮಾಧವ್, ಮುರಳೀಧರರಾವ್ ತರಹದವರಿಗೇ ಟಿಕೆಟ್ ಕೊಡದ ಮೋದಿ, ಅನಿಲ್ ಬಲೂನಿ ಹೆಸರಿಗೆ ಓಕೆ ಅಂದಿದ್ದಾರೆ.

ಬೆಂಗಳೂರು (ಮಾ. 27): ರಾಜ್ಯಸಭಾ ಚುನಾವಣೆಯಲ್ಲಿ ಉತ್ತರಾಖಂಡದಿಂದ ಅನಿಲ್ ಬಲೂನಿ ಎಂಬ ಬಿಜೆಪಿ ಮೀಡಿಯಾ ಪ್ರಭಾರಿ ಬಿಜೆಪಿ ಟಿಕೆಟ್ ಪಡೆದದ್ದು ಭಾರೀ ಚರ್ಚೆಯ ವಿಷಯ. ರಾಮ್ ಮಾಧವ್, ಮುರಳೀಧರರಾವ್ ತರಹದವರಿಗೇ ಟಿಕೆಟ್ ಕೊಡದ ಮೋದಿ, ಅನಿಲ್ ಬಲೂನಿ ಹೆಸರಿಗೆ ಓಕೆ ಅಂದಿದ್ದಾರೆ.

2000 ದಲ್ಲಿ ದಿಲ್ಲಿಯಲ್ಲಿ ಸಣ್ಣಪುಟ್ಟ ಪತ್ರಿಕೆಗಳಿಗೆ ಬರೆಯುತ್ತಿದ್ದ ಅನಿಲ್ ಬಲೂನಿ ಆಗಿನಿಂದ ಮೋದಿ ಅವರಿಗೆ ಪರಿಚಿತರು. ಬಲೂನಿಗೆ ಕೆಲಸ ಇಲ್ಲದಿದ್ದಾಗ ಮೋದಿ ಅವರೇ ಸುಂದರ್ ಸಿಂಗ್ ಭಂಡಾರಿ ಬಳಿ ಕಾರ್ಯದರ್ಶಿಯಾಗಿ ಜೋಡಿಸಿದರು. ನಂತರ ಕಾಕತಾಳೀಯ ಎಂಬಂತೆ ಮೋದಿ ಮುಖ್ಯಮಂತ್ರಿ ಆದರೆ ಭಂಡಾರಿ ಗುಜರಾತ್ ರಾಜ್ಯಪಾಲರಾದರು. ಅನಿಲ್ ಬಲೂನಿ ರಾಜ್ಯಪಾಲರ ವಿಶೇಷ ಅಧಿಕಾರಿಯಾದರು. ಆಗಿನಿಂದ ಬಲೂನಿ ಮುಖ್ಯಮಂತ್ರಿ ಮೋದಿಗೆ ಇನ್ನೂ ಹತ್ತಿರದವರಾಗಿ ನಂತರ ದಿಲ್ಲಿಯಲ್ಲಿ ಕೂಡ ಮೋದಿ ಜೊತೆಗೆ ಬಂದು ರಾಜ್ಯಸಭೆ ತಲುಪಿದ್ದಾರೆ. 

ಬಲೂನಿ ಹೆಸರೇ ಎಲ್ಲೂ ಇರಲಿಲ್ಲವಂತೆ, ಆದರೆ ಮೋದಿ ಅವರೇ ಬಲೂನಿಗೆ ಟಿಕೆಟ್ ಕೊಡಬೇಕು ಎಂದು ಅಮಿತ್ ಶಾಗೆ ಹೇಳಿ ಹಾಕಿಸಿದರಂತೆ. ಈಗ ಆರ್‌ಎಸ್‌ಎಸ್‌ನಿಂದ ಬಂದು ನಾಯಕರಾಗಿರುವವರು ಬಲೂನಿ
ಆಯ್ಕೆ ಕಂಡು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.

ರಾಜಕಾರಣದ ಹೆಚ್ಚಿನ ಸುದ್ದಿಗಳಿಗೆ ಇಂಡಿಯಾ ಗೇಟ್ ಕ್ಲಿಕ್ ಮಾಡಿ