ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸೆಲ್ಫೀ ತೆಗೆದುಕೊಳ್ಳಲು ಮುಂದಾದ ಯುವತಿಯ ಕೈ ಹಿಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ತನೆಗೆ ಬಿಜೆಪಿ ವಕ್ತಾರ ಮಾಳವೀಯ ಕುಹಕವಾಗಿ ಟ್ವೀಟ್ ಮಾಡಿದ್ದು, ಟ್ರಾಲ್ ಆಗಿದೆ.

ಬೆಂಗಳೂರು: ಇತ್ತೀಚೆಗೆ ಸಾಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಎಂ ಸಿದ್ದರಾಮಯ್ಯ ಯುವತಿಯೊಬ್ಬಳಿಗೆ ಸೆಲ್ಫೀ ಪಾಠ ಹೇಳಿಕೊಟ್ಟಿದ್ದು ಸುದ್ದಿಯಾಗಿತ್ತು. ಯುವತಿಯ ಕೈ ಹಿಡಿದೆಳೆದು, ಸೆಲ್ಫೀಗೆ ಫೋಸ್ ನೀಡಿದ್ದಕ್ಕೆ, ಬಿಜೆಪಿ ವಕ್ತಾರ ಅಮಿಚ್ ಮಾಳವೀಯ, 'ಸಾರ್ವಜನಿಕ ಸ್ಥಳದಲ್ಲಿ ಸಿದ್ದರಾಮಯ್ಯ ಮಹಿಳೆಯ ಮೈ ಮುಟ್ಟಬಹುದೇ?' ಎಂದು ಟ್ವೀಟ್ ಮಾಡಿದ್ದರು. ಇದು ಟ್ರಾಲ್ ಆಗಿದ್ದು, 'ಎಲ್ಲವನ್ನೂ ಕೆಟ್ಟ ದೃಷ್ಟಿಯಲ್ಲಿಯೇ ಏಕೆ ನೋಡುತ್ತೀರಿ?' ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಳವೀಯ ಟ್ವೀಟ್ 2 ಸಾವಿರಕ್ಕೂ ಹೆಚ್ಚು ಬಾರಿ ರೀ ಟ್ವೀಟ್ ಆಗಿದ್ದು ಸುಮಾರು 800 ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. 

ಮಾಳವೀಯ ಟ್ವೀಟ್ ಪರವಾಗಿ ಮಾತನಾಡಿರುವುದಕ್ಕಿಂತಲೂ, ವಿರೋಧವಾಗಿ ಮಾತನಾಡಿರುವವರು ಸಮಾರಂಭವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಖೇಶ್ ಅಂಬಾನಿ ಪತ್ನಿ ನೀತು ಅಂಬಾನಿ ಕೈ ಹಿಡಿದಿರುವ ಫೋಟೋ ಹಾಗಿ, ಇದು 'ಸಭ್ಯತೆಯೇ?' ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ವಿದೇಶಿ ಮಹಿಳೆಯೊಬ್ಬನ್ನು ಮೋದಿ ತಬ್ಬಿರುವುದಕ್ಕೂ ಟೀಕೆಗಳು ವ್ಯಕ್ತವಾಗಿದೆ.

Scroll to load tweet…
Scroll to load tweet…
Scroll to load tweet…
Scroll to load tweet…

'ಸಾರ್ವಜನಿಕವಾಗಿ ಅಕ್ಕ-ತಂಗಿ, ತಾಯಯರನ್ನು ತಬ್ಬಿಕೊಳ್ಳುವುದರಲ್ಲಿ ತಪ್ಪೇನಿದೆ,' ಎಂದು ಹಲವರು ಪ್ರಶ್ನಿಸಿದ್ದಾರೆ.