ಬಿಜೆಪಿಯಿಂದ ಸ್ಲಂ ರಾಜಕೀಯ: ಬಿಎಸ್'ವೈ ನಾಳೆ ಬೆಂಗಳೂರಿನ ಗಾಂಧಿನಗರದ ಸ್ಲಂ'ನಲ್ಲಿ ವಾಸ್ತವ್ಯ

First Published 9, Feb 2018, 8:14 PM IST
BJP SLUM Politics
Highlights

ಬಿಎಸ್'ವೈ ಜೊತೆ ಆರ್.ಅಶೋಕ್, ಪಿ.ಸಿ. ಮೋಹನ್, ಎನ್.ರವಿ ಕೂಡ ವಾಸ್ತವ್ಯ ಹೂಡಲಿದ್ದಾರೆ

ಬೆಂಗಳೂರು(ಫೆ.09): ಪರಿವರ್ತನ ಯಾತ್ರೆಯ ನಂತರ ಬಿಜೆಪಿ ಸ್ಲಂ ರಾಜಕೀಯ ಶುರುವಿಟ್ಟುಕೊಳ್ಳಲಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಒಳಗೊಂಡು ಪ್ರಮುಖ ನಾಯಕರು ಕೊಳಚೆ ಪ್ರದೇಶಗಳಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪಿ.ಸಿ.ಮೋಹನ್, ಕಳೆದ 84 ದಿನಗಳಿಂದ ರಾಜ್ಯದ ನಾನಾ ಭಾಗಗಳಲ್ಲಿ ಪರಿವರ್ತನಾ ಯಾತ್ರೆ ನಡೆಸಿದ್ದೇವೆ. ಈಗ ಕೊಳಚೆ ಪ್ರದೇಶಗಳ ಜನರ ಕಷ್ಟ ಅರಿಯುವ ನಿಟ್ಟಿನಲ್ಲಿ ಸ್ಲಂ'ಗಳಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿದ್ದೇವೆ. ಬೆಂಗಳೂರಿನ ಗಾಂಧಿನಗರದ ಲಕ್ಷಣ'ಪುರಿ ಕೊಳಚೆ ಪ್ರದೇಶದಲ್ಲಿ ನಾಳೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಒಂದು ದಿನದ ವಾಸ್ತವ್ಯ ಹೂಡಲಿದ್ದಾರೆ. ಬಿಎಸ್'ವೈ ಜೊತೆ ಆರ್.ಅಶೋಕ್, ಪಿ.ಸಿ. ಮೋಹನ್, ಎನ್.ರವಿ ಕೂಡ ವಾಸ್ತವ್ಯ ಹೂಡಲಿದ್ದಾರೆ' ಎಂದು ತಿಳಿಸಿದರು.

 

ರಾಜ್ಯದ ವಿವಿಧೆಡೆ ಇತರೆ ವಾಸ್ತವ್ಯ ಹೂಡುವ ನಾಯಕರ ಪಟ್ಟಿ

ಶಿವಮೊಗ್ಗ : ಈಶ್ವರಪ್ಪ

ಹುಬ್ಬಳ್ಳಿ :   ಶೆಟ್ಟರ್

ವಿಜಯಪುರ:  ಗೋವಿಂದ ಕಾರಜೋಳ

ಮೈಸೂರು: ಶೋಭಾ ಕರಂದ್ಲಾಜೆ.

ತಿಪ್ಪಾರೆಡ್ಡಿ :  ಚಿತ್ರದುರ್ಗ

ತಿಪ್ಪರಾಜು :  ರಾಯಚೂರು

loader