ಪ.ಬಂಗಾಳದಲ್ಲಿ ಬೇರು ಗಟ್ಟಿಗೊಳಿಸುತ್ತಿರುವ ಬಿಜೆಪಿ| ಬಿಜೆಪಿ ಬತ್ತಳಿಕೆಯಲ್ಲಿ ‘ಜೈ ಮಹಾ ಕಾಳಿ, ಜೈ ಶ್ರೀರಾಮ್’ ಘೋಷಣೆ| ಮಮತಾ ಸರ್ಕಾರ ಕಿತ್ತೆಸೆಯಲು ತಂತ್ರ ರೂಪಿಸಿದ ಬಿಜೆಪಿ| ಪ.ಬಂಗಾಳ ಬಿಜೆಪಿ ಉಸ್ತುವಾರಿ ಕೈಲಾಶ್ ವಿಜಯವರ್ಗೀಯ ಮಾಹಿತಿ|
ಕೋಲ್ಕತ್ತಾ(ಜೂ.04): ಪ.ಬಂಗಾಳದಲ್ಲಿ ತನ್ನ ಬೇರನ್ನು ಗಟ್ಟಿಗೊಳಿಸುತ್ತಿರುವ ಬಿಜೆಪಿ, ರಾಜ್ಯದಲ್ಲೂ ಕೇಸರಿ ಬಾವುಟ ರಾರಾಜಿಸುವಂತೆ ಮಾಡಲು ತಂತ್ರ ರೂಪಿಸಿದೆ.
ಜೈ ಶ್ರೀರಾಮ್ ಘೋಷಣೆ ಕೂಗಿದವರನ್ನು ಜೈಲಿಗೆ ಕಳುಹಿಸುತ್ತಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರವನ್ನು, ಅಧಿಕಾರದಿಂದ ಕಿತ್ತೆಸೆಯಲು ಬಿಜೆಪಿ ಶಪಥ ಮಾಡಿದೆ.
ಅದರಂತೆ ಬಂಗಾಳದಲ್ಲಿ ಪಕ್ಷದ ಪ್ರಭಾವ ವೃದ್ಧಿಸಲು ‘ಜೈ ಮಹಾ ಕಾಳಿ ಮತ್ತು ಜೈ ಶ್ರೀರಾಮ್’ ಘೋಷಣೆಯನ್ನು ಬಳಸುವುದಾಗಿ ಬಿಜೆಪಿ ಸ್ಪಷ್ಟಪಡಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಪ.ಬಂಗಾಳ ಬಿಜೆಪಿ ಉಸ್ತುವಾರಿ ಕೈಲಾಶ್ ವಿಜಯವರ್ಗೀಯ, ಮಮತಾ ಸರ್ಕಾರದ ವಿರುದ್ಧ ಜನಾಂದೋಲನ ರೂಪಿಸಲು ಬಿಜೆಪಿ ‘ಜೈ ಮಹಾಕಾಳಿ ಮತ್ತು ಜೈ ಶ್ರೀರಾಮ್’ ಘೋಷಣೆಯನ್ನು ರಾಜ್ಯದ ಉದ್ದಗಲಕ್ಕೂ ಮೊಳಗಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರವನ್ನು ಕಿತ್ತೆಸೆಯಲು ಕಾಳಿ ಮಾತೆ ಮತ್ತು ಪ್ರಭು ಶ್ರೀರಾಮ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ ಎಂದು ವಿಜಯವರ್ಗೀಯ ಭರವಸೆ ವ್ಯಕ್ತಪಡಿಸಿದ್ದಾರೆ.
