ಇತರ ರಾಜ್ಯಗಳಲ್ಲಿ ನಾವು ಮುಸ್ಲಿಮರಿಗೆ ಟಿಕೆಟ್ ನೀಡಿದ್ದೇವೆ, ಇಲ್ಲಿಯೂ (ಉತ್ತರ ಪ್ರದೇಶ) ಆ ಕುರಿತು ಮಾತುಕತೆ ನಡೆಯಬೇಕಿತ್ತು: ರಾಜನಾತ್ ಸಿಂಗ್

ಮುಂಬೈ (ಫೆ.23): ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಮುಸ್ಲಿಮರಿಗೂ ಟಿಕೆಟ್ ನೀಡಬೇಕಿತ್ತೆಂಬ ಅಭಿಪ್ರಾಯವನ್ನು ಪಕ್ಷದ ರಾಷ್ಟ್ರೀಯ ನಾಯಕ ರಾಜನಾಥ್ ಸಿಂಗ್ ವ್ಯಕ್ತಪಡಿಸಿದ್ದಾರೆ.

ಟೈಮ್ಸ್’ ನೌಗೆ ನೀಡಿದ ಸಂದರ್ಶನದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಇತರ ರಾಜ್ಯಗಳಲ್ಲಿ ನಾವು ಮುಸ್ಲಿಮರಿಗೆ ಟಿಕೆಟ್ ನೀಡಿದ್ದೇವೆ, ಇಲ್ಲಿಯೂ (ಉತ್ತರ ಪ್ರದೇಶ) ಆ ಕುರಿತು ಮಾತುಕತೆ ನಡೆಯಬೇಕಿತ್ತು. ಬಹುಷ: ಗೆಲ್ಲುವಂತಹ ಸೂಕ್ತ ಅಭ್ಯರ್ಥಿ ಸಂಸದೀಯ ಮಂಡಳಿಗೆ ಸಿಗದಿರಬಹುದು, ಆದರೆ ಮುಸ್ಲಿಮರಿಗೆ ಟಿಕೆಟ್ ಸಿಗಲೆಬೇಕೆಂದು ನಾನು ಭಾವಿಸುತ್ತೇನೆ, ಎಂದಿದ್ದಾರೆ.

ಮುಂದಿನ ದಿನಗಳಲ್ಲಿ ಈ ಕುರಿತು ನಾವು ಗಮನಹರಿಸುತ್ತೇವೆಯೆಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಉತ್ತರ ಪ್ರದೇಶ ರಾಜ್ಯದಲ್ಲಿ ಶೇ.20ರಷ್ಟು ಮುಸ್ಲಿಮ್ ಜನನಸಂಖ್ಯೆಯಿದೆ. ಉತ್ತರ ಪ್ರದೇಶದಲ್ಲಿ ಇಂದು ನಾಲ್ಕನೇ ಹಂತ್ದ ಮತದಾನ ನಡೆಯುತ್ತಿದ್ದು, ಇನ್ನೂ ಮೂರು ಹಂತದ ಮತದಾನ ಬಾಕಿ ಇದೆ.