ಮೈಸೂರು[ಜು. 25]  ಮೈಸೂರಿಗೆ  ಆಗಮಿಸಿದ ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕ ಎಸ್‌.ಎಂ.ಕೃಷ್ಣ ಮಾಧ್ಯಮದವರಿಗೆ ಸೆಲ್ಯೂಟ್ ಹೊಡೆದು ಮುಂದಕ್ಕೆಹೋಗಿದ್ದಾರೆ.

"

ಮೈಸೂರಿನ ವಿಮಾನ‌ ನಿಲ್ದಾಣದಿಂದ ನೇರವಾಗಿ ಬೆಟ್ಟಕ್ಕೆ ಕೃಷ್ಣ ತೆರಳಿದ್ದಾರೆ. ರಾಜ್ಯ ರಾಜಕೀಯದ ಬಗ್ಗೆ ಎಸ್‌ಎಂಕೆ  ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಾಧ್ಯಮದವರು ಮಾತನಾಡಿಸಲು ಕರೆದರೆ ಸೆಲ್ಯೂಟ್ ಮಾಡಿ ಮಾತನಾಡದೆ ಕೃಷ್ಣ ತೆರಳಿದ್ದಾರೆ.

ಕರ್ನಾಟಕ ರಾಜಕೀಯ ಹೈಡ್ರಾಮಾ: ಆರಂಭದಿಂದ ಅಂತ್ಯದವರೆಗೆ

ರಾಜ್ಯದಲ್ಲಿನ ಕಾಂಗ್ರೆಸ್- ಜೆಡಿಎಸ್ ದೋಸ್ತಿ ಸರ್ಕಾರ ವಿಶ್ವಾಸ ಕಳೆದುಕೊಂಡಿದೆ. ಇದರ ನಡುವೆ ಬಿಜೆಪಿ ನಾಯಕರು ದೆಹಲಿಗೆ ತೆರಳಿದ್ದು  ಹೈಕಮಾಂಡ್ ಭೇಟಿಗೆ ಕಾದು ಕುಳಿತಿದ್ದಾರೆ.