ನವದೆಹಲಿ ( ಅ.07): ಪ್ರಧಾನಿ ನರೇಂದ್ರ ಮೊದಿ ಹುತಾತ್ಮ ಯೋಧರನ್ನು ರಾಜಕೀಯ ಉದ್ದೇಶಕ್ಕಾಗಿ ‘ದಳ್ಳಾಳಿ’ಗಳ ತರಹ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಆರೆಸ್ಸೆಸ್ ಹಾಗೂ ಬಿಜೆಪಿ ತೀವ್ರವಾಗಿ ಪ್ರತಿಕ್ರಯಿಸಿದೆ.

ರಾಹುಲ್ ಗಾಂಧಿ ಅಂತಹ ಮೂರ್ಖತನದ ಹೇಳಿಕೆ ನೀಡುವ ಮುಂಚೆ ತುಸು ಯೋಚಿಸಬೇಕಿತ್ತು, ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ಆರೆಸ್ಸೆಸ್ ನಾಯಕ ಎಂ.ಜಿ. ವೈದ್ಯ ಹೇಳಿದ್ದಾರೆ.

ಭಾರತೀಯ ಸೇನೆ ಬಗ್ಗೆ ಮಾತನಾಡುವಾಗ ‘ದಳ್ಳಾಳಿ’ ಪದ ಬಳಕೆ ಸಮಂಜಸವೇ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ರಾಹುಲ್ ಗಾಂಧಿಗೆ ಸವಾಲೆಸೆದಿದ್ದಾರೆ.

ರಾಹುಲ್ ಗಾಂಧಿ ಮಾನೋವೈದ್ಯಕೀಯ ಚಿಕಿತ್ಸೆ ಮಾಡಿಕೊಳ್ಳಬೇಕು ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯವಾಡಿದ್ದಾರೆ.

ಸರ್ಜಿಕಲ್ ದಾಳಿ ವಿಚಾರದಲ್ಲಿ ರಾಹುಲ್ ಗಾಂಧಿ ಕೀಳು ಮಟ್ಟದ ರಾಜಕೀಯ ನಡೆಸುತ್ತಿರುವುದು ದುರಾದೃಷ್ಟಕರ ಎಂದು ಶಿವಸೇನೆ ವಕ್ತಾರೆ ಮನೀಶಾ ಕಾಯಂಡೆ ಹೇಳಿದ್ದಾರೆ.