894 ಕೋಟಿ ರು. ಮೌಲ್ಯದ ಆಸ್ತಿಯನ್ನು ಘೋಷಿಸಿಕೊಳ್ಳುವ ಮೂಲಕ ಬಿಜೆಪಿ ದೇಶದ ಅತಿ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದೆ. 2015-16ನೇ ಸಾಲಿನ ಅಂಕಿ-ಅಂಶಗಳು ಇವಾಗಿದ್ದು, ಡೆಮಾಕ್ರಟಿಕ್ ರಿಫಾರ್ಮ್ಸ್ ಎಂಬ ಸಂಸ್ಥೆ ಸೋಮವಾರ ಇದನ್ನು ಬಹಿರಂಗಪಡಿಸಿದೆ.

ನವದೆಹಲಿ(ಅ,17): 894 ಕೋಟಿ ರು. ಮೌಲ್ಯದ ಆಸ್ತಿಯನ್ನು ಘೋಷಿಸಿಕೊಳ್ಳುವ ಮೂಲಕ ಬಿಜೆಪಿ ದೇಶದ ಅತಿ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದೆ. 2015-16ನೇ ಸಾಲಿನ ಅಂಕಿ-ಅಂಶಗಳು ಇವಾಗಿದ್ದು, ಡೆಮಾಕ್ರಟಿಕ್ ರಿಫಾರ್ಮ್ಸ್ ಎಂಬ ಸಂಸ್ಥೆ ಸೋಮವಾರ ಇದನ್ನು ಬಹಿರಂಗಪಡಿಸಿದೆ.

ಇನ್ನು ವಿಪಕ್ಷ ಕಾಂಗ್ರೆಸ್ ಇದೇ ಸಾಲಿನಲ್ಲಿ 759 ಕೋಟಿ ರು. ಆಸ್ತಿ ಹೊಂದಿದ್ದು, 2ನೇ ಸ್ಥಾನ ಗಳಿಸಿದೆ. ಬಿಜೆಪಿ 25 ಕೋಟಿ ರು. ಸಾಲ ಹೊಂದಿದ್ದರೆ, ಕಾಂಗ್ರೆಸ್ ಸಾಲದ ಪ್ರಮಾಣ 329 ಕೋಟಿ ರುಪಾಯಿ. ಬಿಎಸ್‌ಪಿ 557 ಕೋಟಿ, ಸಿಪಿಎಂ 432 ಕೋಟಿ ಆಸ್ತಿಯ ಮೂಲಕ ನಂತರದ ಸ್ಥಾನ ಪಡೆದಿವೆ.

ಬಿಜೆಪಿ 2004-05ರಲ್ಲಿ 123 ಕೋಟಿ ರು. ಆಸ್ತಿ ಹೊಂದಿತ್ತು. 11 ವರ್ಷದಲ್ಲಿ ಅದರ ಆಸ್ತಿ ಪ್ರಮಾಣ ಶೇ.627ರಷ್ಟು ಹೆಚ್ಚಾದಂತಾಗಿದೆ. ಕಾಂಗ್ರೆಸ್ ಆಸ್ತಿ ಪ್ರಮಾಣ ಇದೇ ಅವಧಿಯಲ್ಲಿ ಶೇ.353.41ರಷ್ಟು ಏರಿದೆ.