ರಾಜ್ಯಕ್ಕೆ ಆಗಮಿಸುತ್ತಿರುವ ಬಿಜೆಪಿ ರಾಷ್ಟಾ್ರಧ್ಯಕ್ಷ ಅಮಿತ್‌ ಶಾ, ರಾಷ್ಟ್ರಕವಿ ಕುವೆಂಪು ಅವರ ಸಮಾಧಿ ಸ್ಥಳ ಕುಪ್ಪಳ್ಳಿಯ ಕವಿಶೈಲಕ್ಕೆ ಮಾ.25ರಂದು ಭೇಟಿ ನೀಡಲಿದ್ದಾರೆ.

ಶಿವಮೊಗ್ಗ: ರಾಜ್ಯಕ್ಕೆ ಆಗಮಿಸುತ್ತಿರುವ ಬಿಜೆಪಿ ರಾಷ್ಟಾ್ರಧ್ಯಕ್ಷ ಅಮಿತ್‌ ಶಾ, ರಾಷ್ಟ್ರಕವಿ ಕುವೆಂಪು ಅವರ ಸಮಾಧಿ ಸ್ಥಳ ಕುಪ್ಪಳ್ಳಿಯ ಕವಿಶೈಲಕ್ಕೆ ಮಾ.25ರಂದು ಭೇಟಿ ನೀಡಲಿದ್ದಾರೆ.

ಜಿಲ್ಲಾ ಬಿಜೆಪಿಯು ಅಮಿತ್‌ ಶಾ ಅವರು ಮಾ.26ರಂದು ಜಿಲ್ಲೆಗೆ ಭೇಟಿ ನೀಡುವುದು ಖಚಿತವಿತ್ತು. ಆದರೆ ಕವಿಶೈಲಕ್ಕೆ ಭೇಟಿ ನೀಡುವ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ ಅಮಿತ್‌ ಶಾ ಕಾರ್ಯಕ್ರಮ ಪಟ್ಟಿಬಂದಾಗ ಕುಪ್ಪಳ್ಳಿಯೂ ಸೇರಿದ್ದು ಸ್ವತಃ ಸ್ಥಳೀಯ ಮುಖಂಡರಿಗೇ ಅಚ್ಚರಿ ಮೂಡಿಸಿದೆ.

ಕುಪ್ಪಳ್ಳಿಯಲ್ಲಿ ಕುವೆಂಪು ಪುತ್ರ ಪೂರ್ಣಚಂದ್ರ ತೇಜಸ್ವಿ ಅವರ ಸಮಾಧಿಯೂ ಇದೆ. ಚುನಾವಣಾ ಸಂದರ್ಭದಲ್ಲಿ ತಾವು ಇಡುವ ಪ್ರತಿಯೊಂದು ಹೆಜ್ಜೆಯೂ ಸಹ ಒಂದಿಷ್ಟಾದರೂ ಮತಗಳನ್ನು ಬಿಜೆಪಿಗೆ ತಂದುಕೊಡಬೇಕು ಎಂಬ ಚಾಣಾಕ್ಷತನ ಹೊಂದಿರುವ ಅಮಿತ್‌ ಶಾ ಅವರು ಕುವೆಂಪು ಅವರನ್ನು ಪ್ರಭಾವಿಸಿದ ಕುಪ್ಪಳ್ಳಿಗೆ ಭೇಟಿ ನೀಡುತ್ತಿರುವುದೂ ಇದೇ ಕಾರಣ ಎಂಬುದನ್ನು ಹಲವು ಬಿಜೆಪಿ ಮುಖಂಡರು ಖಚಿತಪಡಿಸುತ್ತಾರೆ. ಸಮಾಜವಾದಿ ನೆಲವಾಗಿದ್ದ ಶಿವಮೊಗ್ಗ ನಂತರ ಬಿಜೆಪಿ ಕೈವಶವಾದರೂ ಮತ್ತೆ ಕೈಬಿಟ್ಟಿತ್ತು. ಅದನ್ನು ಮರುವಶ ಮಾಡಿಕೊಳ್ಳಲು ತೀವ್ರ ಹಿಂದುತ್ವವಾದ ಎಂಬ ಹಣೆಪಟ್ಟಿಕಷ್ಟಸಾಧ್ಯ ಎಂಬ ವಿಶ್ಲೇಷಣೆಯ ಹಿನ್ನಲೆಯಲ್ಲಿ ಅಮಿತ್‌ ಶಾ ಅವರ ಕುಪ್ಪಳ್ಳಿ ಭೇಟಿ ಮಹತ್ವ ಪಡೆಯುತ್ತದೆ.