ಕಾನೂನುಬಾಹಿರವಾಗಿ ಪ್ರಯಾಣ ಭತ್ಯೆ: ಕಾಂಗ್ರೆಸ್‌ನ 6, ಜೆಡಿಎಸ್‌ನ 2 ಎಂಎಲ್‌ಸಿಗಳಿಗೆ ನೋಟಿಸ್‌ | ಕ್ರಿಮಿನಲ್‌ ಕೇಸ್‌ ದಾಖಲಿಗೆ ಬಿಜೆಪಿ ಆಗ್ರಹ: ಶಂಕರಮೂರ್ತಿ ವಿರುದ್ಧ ಅವಿಶ್ವಾಸಕ್ಕೆ ಕಾಂಗ್ರೆಸ್‌ ಯತ್ನ ಬೆನ್ನಲ್ಲೇ ಈ ಬೆಳವಣಿಗೆ

ಬೆಂಗಳೂರು : ತಪ್ಪು ಮಾಹಿತಿ ನೀಡಿ ಕಾನೂನು ಬಾಹಿರವಾಗಿ ವಿಧಾನ​ಪರಿಷತ್ತಿನಿಂದ ಪ್ರಯಾಣ ಭತ್ಯೆ ಪಡೆದಿ​ರುವ ಆರೋಪಕ್ಕೆ ಗುರಿಯಾಗಿರುವ 8 ಮಂದಿ ವಿಧಾನಪರಿಷತ್‌ ಸದಸ್ಯರಿಗೆ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ನೋಟಿಸ್‌ ಜಾರಿಗೊಳಿಸಿದ್ದಾರೆ.

ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಸೇರಿದಂತೆ 8 ಮಂದಿ ಸದಸ್ಯರು ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿ ವಂಚಿಸಿರುವುದರಿಂದ ಸದಸ್ಯತ್ವ ರದ್ದು ಮಾಡಬೇಕು ಮತ್ತು ಕ್ರಿಮಿನಲ್‌ ಕೇಸು ದಾಖಲಿಬೇಕೆಂದು ಬಿಜೆಪಿ ಒತ್ತಾಯಿಸಿದ್ದು, ಇದಕ್ಕೆ ಸಂಬಂಧಿಸಿ ಆಕ್ಷೇಪಗಳಿದ್ದರೆ ಜೂನ್‌ 3ರ ಒಳಗಾಗಿ ಸಲ್ಲಿಸುವಂತೆ ನೋಟಿಸ್‌ ರವಾನಿಸಿದ್ದಾರೆ. ಪರಿಷತ್ತಿನ ಸಭಾಪತಿ ಸ್ಥಾನದ ವಿರುದ್ಧ ಅವಿಶ್ವಾಸ ಮಂಡಿಸಲು ಕಾಂಗ್ರೆಸ್‌ ಈಗಾಗಲೇ ಪ್ರಯತ್ನ ಆರಂಭಿಸಿದ್ದು, ಈ ಸಂದರ್ಭದಲ್ಲಿ ಸಭಾಪತಿ ಅವರು 8 ಮಂದಿ ಸದಸ್ಯರಿಗೆ ನೋಟಿಸ್‌ ನೀಡಿರುವುದು ಚರ್ಚೆ ಹುಟ್ಟುಹಾಕಿದೆ. ಇದು ಪರಿಷತ್ತಿನಲ್ಲಿ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನವೇ ಎನ್ನುವ ಪ್ರಶ್ನೆಗೂ ಕಾರಣವಾಗಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್‌, ಉಪ ಮೇಯರ್‌ ಚುನಾವಣೆ ವೇಳೆ ಪರಿಷತ್ತಿನ ಕಾಂಗ್ರೆಸ್‌ ಸದಸ್ಯರಾದ ರಘು ಆಚಾರ್‌, ಬೋಸರಾಜು, ಎಸ್‌.ರವಿ, ಅಲ್ಲಂ ವೀರಭದ್ರಪ್ಪ, ರಾಮಪ್ಪ ತಿಮ್ಮಾಪುರ, ಎಂ.ಡಿ.ಲಕ್ಷ್ಮೇ ನಾರಾಯಣ, ಜೆಡಿಎಸ್‌ನ ಸಿ.ಮನೋಹರ್‌, ಅಪ್ಪಾಜಿಗೌಡ ಅವರು ಮತದಾನ ಮಾಡಿದ್ದರು. ಇವರು ಈ ಸಂಬಂಧ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿಯ ಪದ್ಮನಾಭ ರೆಡ್ಡಿ ಆರೋಪಿಸಿದ್ದರು.

ತಪ್ಪು ಮಾಹಿತಿ ನೀಡಿ ಕಾನೂನು ಬಾಹಿರವಾಗಿ ವಿಧಾನ​ಪರಿಷತ್ತಿನಿಂದ ಪ್ರಯಾಣ ಭತ್ಯೆ ಪಡೆದಿ​ರುವ ಆರೋಪಕ್ಕೆ ಗುರಿಯಾಗಿರುವ 8 ಮಂದಿ ವಿಧಾನಪರಿಷತ್‌ ಸದಸ್ಯರಿಗೆ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ನೋಟಿಸ್‌ ಜಾರಿಗೊಳಿಸಿದ್ದಾರೆ.
ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಸೇರಿದಂತೆ 8 ಮಂದಿ ಸದಸ್ಯರು ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿ ವಂಚಿಸಿರುವುದರಿಂದ ಸದಸ್ಯತ್ವ ರದ್ದು ಮಾಡಬೇಕು ಮತ್ತು ಕ್ರಿಮಿನಲ್‌ ಕೇಸು ದಾಖಲಿಬೇಕೆಂದು ಬಿಜೆಪಿ ಒತ್ತಾಯಿಸಿದ್ದು, ಇದಕ್ಕೆ ಸಂಬಂಧಿಸಿ ಆಕ್ಷೇಪಗಳಿದ್ದರೆ ಜೂನ್‌ 3ರ ಒಳಗಾಗಿ ಸಲ್ಲಿಸುವಂತೆ ನೋಟಿಸ್‌ ರವಾನಿಸಿದ್ದಾರೆ. ಪರಿಷತ್ತಿನ ಸಭಾಪತಿ ಸ್ಥಾನದ ವಿರುದ್ಧ ಅವಿಶ್ವಾಸ ಮಂಡಿಸಲು ಕಾಂಗ್ರೆಸ್‌ ಈಗಾಗಲೇ ಪ್ರಯತ್ನ ಆರಂಭಿಸಿದ್ದು, ಈ ಸಂದರ್ಭದಲ್ಲಿ ಸಭಾಪತಿ ಅವರು 8 ಮಂದಿ ಸದಸ್ಯರಿಗೆ ನೋಟಿಸ್‌ ನೀಡಿರುವುದು ಚರ್ಚೆ ಹುಟ್ಟುಹಾಕಿದೆ. ಇದು ಪರಿಷತ್ತಿನಲ್ಲಿ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನವೇ ಎನ್ನುವ ಪ್ರಶ್ನೆಗೂ ಕಾರಣವಾಗಿದೆ.

ಆದರೆ, ಈಗ ಕಾಂಗ್ರೆಸ್‌ನ 6 ಮಂದಿ ಸದಸ್ಯರೂ ಸೇರಿದಂತೆ 8 ಮಂದಿಯ ಸದಸ್ಯತ್ವ ರದ್ದುಗೊಳಿಸಿ ದರೂ ಬಿಜೆಪಿಗೆ ಅಂತಹ ಲಾಭವೇನೂ ಆಗಲಾ ರದು. ಏಕೆಂದರೆ ಆಗಲೂ ಬಿಜೆಪಿ ತನ್ನ ಅಧಿಕಾರ ಉಳಿಸಿಕೊಳ್ಳುವುದು ಕಷ್ಟಸಾಧ್ಯ. ಅದರಲ್ಲೂ ಜೆಡಿಎಸ್‌ ಬೆಂಬಲ ಇಲ್ಲದೆ ಬಿಜೆಪಿ ಪೀಠ ಉಳಿಸಿ ಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಇದೊಂದು ಬೆದರಿಕೆ ತಂತ್ರವಾಗಿರಬಹುದು ಎನ್ನಲಾಗುತ್ತಿದೆ.
ಪರಿಷತ್ತಿನ ಒಟ್ಟು 75 ಮಂದಿ ಸದಸ್ಯ ಬಲದಲ್ಲಿ ಕಾಂಗ್ರೆಸ್‌ 32 ಸದಸ್ಯರನ್ನು ಹೊಂದಿದ್ದು, ಪಕ್ಷೇತರರಾದ ಭೈರತಿ ಸುರೇಶ್‌, ಎಂ.ಡಿ.ಲಕ್ಷ್ಮೇ ನಾರಾಯಣ, ವಿವೇಕರಾವ್‌ ಪಾಟೀಲ್‌ ಕಾಂಗ್ರೆಸ್‌ನ ಸಹ ಸದಸ್ಯರಾಗಿದ್ದಾರೆ. ಇದರೊಂದಿಗೆ ಕಾಂಗ್ರೆಸ್‌ ಬಲ 35ಕ್ಕೇರಿದೆ. ಆದರೆ ಸಭಾಪತಿ ಶಂಕರಮೂರ್ತಿ ಸೇರಿದಂತೆ ಬಿಜೆಪಿ 23 ಮಂದಿ ಸದಸ್ಯ ಬಲ ಹೊಂದಿದೆ. ಇನ್ನು ಜೆಡಿಎಸ್‌ 13 ಸದಸ್ಯರನ್ನು ಹೊಂದಿದೆ. ಇದಲ್ಲದೆ ಪಕ್ಷೇತರರಾದ ಡಿ.ಯು. ಮಲ್ಲಿಕಾರ್ಜುನ್‌ ಮತ್ತು ಬಸನಗೌಡ ಪಾಟೀಲ್‌ ಯತ್ನಾಳ್‌ ಕೂಡ ಇದ್ದಾರೆ. ನಾಮ ನಿರ್ದೇಶನ ಸದಸ್ಯರ ಒಂದು ಸ್ಥಾನ ಮತ್ತು ವಿಮಲಾಗೌಡ ನಿಧನದಿಂದ ತೆರವಾಗಿರುವ 1 ಸ್ಥಾನ ಖಾಲಿ ಇದೆ. ಒಟ್ಟಾರೆ 73 ಸದಸ್ಯ ಬಲವಿದೆ. ಆದರೆ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್‌ ಸಿದ್ಧತೆ ನಡೆಸಿದ್ದು, ಒಂದೊಮ್ಮೆ ವಿಶ್ವಾಸಮತ ನಡೆ ದರೆ ಅಧಿಕಾರ ಹಿಡಿಯಲು (ಒಟ್ಟು ಸದಸ್ಯರಲ್ಲಿ ಅರ್ಧಕ್ಕಿಂತ ಹೆಚ್ಚು ) 38 ಮತಗಳನ್ನು ಗಳಿಸಬೇಕಾಗುತ್ತದೆ.
ಸದಸ್ಯತ್ವ ರದ್ದಾದರೆ ಏನಾಗುತ್ತೆ?: ಒಂದು ವೇಳೆ ಆರೋಪ ಹೊತ್ತ 8 ಮಂದಿಯ ಸದಸ್ಯತ್ವ ರದ್ದಾದರೆ ಕಾಂಗ್ರೆಸ್‌ ಬಲ 35ರ ಬದಲು 29ಕ್ಕೆ ಇಳಿಯುತ್ತದೆ. ಜೆಡಿಎಸ್‌ ಬಲ 13ರ ಬದಲು 11ಕ್ಕೆ ಇಳಿಯುತ್ತದೆ. ಆಗ ಕಾಂಗ್ರೆಸ್‌ಗೆ ಶಂಕರ ಮೂರ್ತಿ ಅವರನ್ನು ಸಭಾಪತಿ ಸ್ಥಾನದಿಂದ ಕೆಳಗೆ ಇಳಿಸಲು ಜೆಡಿಎಸ್‌ ಬೆಂಬಲ ಅನಿವಾರ್ಯವಾಗುತ್ತದೆ. ಇನ್ನು ಬಿಜೆಪಿ ಬಳಿ ಸಭಾಪತಿ ಶಂಕರಮೂರ್ತಿ ಸೇರಿದಂತೆ 23 ಸದಸ್ಯಬಲ ಇರುತ್ತದೆ. ಇವರೊಂ ದಿಗೆ ಡಿ.ಯು. ಮಲ್ಲಿಕಾರ್ಜುನ್‌ ಮತ್ತು ಬಸನ ಗೌಡ ಪಾಟೀಲ್‌ ಯತ್ನಾಳ್‌ ಅವರ ಬೆಂಬಲ ಪಡೆ ದರೆ ಬಿಜೆಪಿ ಬಲ 25ಕ್ಕೆ ಹೆಚ್ಚುತ್ತದೆ. ಆದರೂ ಕಾಂಗ್ರೆಸ್‌ನ ಸಮಬಲಕ್ಕೆ ಬಿಜೆಪಿ ಬರಲಾಗದು. ಹಾಗಾಗಿ ಜೆಡಿಎಸ್‌ನ ಸದಸ್ಯರೂ ಸೇರಿದಂತೆ 8 ಮಂದಿಗೆ ನೋಟಿಸ್‌ ನೀಡಿರುವುದರ ಹಿಂದೆ ಬೆಂಬಲ ವಾಪಸ್‌ ಪಡೆಯಬೇಡಿ ಎಂದು ಜೆಡಿ ಎಸ್‌ಗೆ ಎಚ್ಚರಿಕೆ ನೀಡುವ ತಂತ್ರ ಅಡಗಿದೆ ಎಂದೂ ಹೇಳಲಾಗಿದೆ.