ಸಿದ್ದರಾಮಯ್ಯರ ಅಹಿಂದ ಜಪಕ್ಕೆ ಬಿಜೆಪಿ ಕೌಂಟರ್ ಆಟ್ಯಾಕ್ ಮಾಡಲು ತಯಾರಾಗಿದೆಯೆ ಎನ್ನುವ ಪ್ರಶ್ನೆ ಎದ್ದಿದೆ.  ಪ್ರತಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ ನೀಡಿರುವ ಹೇಳಿಕೆ ಅದನ್ನ ಪುಷ್ಠಿಕರಿಸುವಂತಿದೆ.

ಬೆಂಗಳೂರು (ಜು.28): ಸಿದ್ದರಾಮಯ್ಯರ ಅಹಿಂದ ಜಪಕ್ಕೆ ಬಿಜೆಪಿ ಕೌಂಟರ್ ಆಟ್ಯಾಕ್ ಮಾಡಲು ತಯಾರಾಗಿದೆಯೆ ಎನ್ನುವ ಪ್ರಶ್ನೆ ಎದ್ದಿದೆ. ಪ್ರತಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ ನೀಡಿರುವ ಹೇಳಿಕೆ ಅದನ್ನ ಪುಷ್ಠಿಕರಿಸುವಂತಿದೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದುಳಿದ ವರ್ಗಗಳ ವಿಚಾರ ಸಂಕೀರ್ಣ ಏರ್ಪಡಿಸಿರೋದಾಗಿ ತಿಳಿಸಿದರು. ನಾಳೆ ನಡೆಯಲಿರುವ ವಿಚಾರ ಸಂಕೀರ್ಣವನ್ನು ಕೇಂದ್ರ ಸಚಿವ ತಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಲಿದ್ದಾರೆ ಎಂದು ಈಶ್ವರರಪ್ಪನವರು ತಿಳಿಸಿದ್ದಾರೆ. ಹಿಂದುಳಿದ ವರ್ಗಗಳ ತಿದ್ದುಪಡಿ ಮಸೂದೆಗೆ ರಾಜ್ಯ ಸರ್ಕಾರ ಸಹ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಹಿಂದುಳಿದವರನ್ನು ಜಾಗೃತ ಮಾಡುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ವಿಪಕ್ಷ ನಾಯಕ ಈಶ್ವರಪ್ಪ ಹೇಳಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಸಮಾವೇಶ ನಡೆಸುವ ಬಗ್ಗೆ ನಾಳಿನ ವಿಚಾರ ಸಂಕೀರ್ಣದಲ್ಲಿ ಚರ್ಚಿಸಿ, ತಿರ್ಮಾನಿಸಲಾಗುವುದು ಎಂದು ಅವರು ಹೇಳಿದರು. ಇದೇ ವೇಳೆ ಸಿಎಂ ಸಿದ್ದರಾಮಯ್ಯರ ವಿರುದ್ಧ ವಾಗ್ದಾಳಿ ಮಾಡಿದ ಈಶ್ವರಪ್ಪ, ಹಿಂದುಳಿದವರು ಇವರ ಸ್ವತ್ತೇ ಎಂದು ಹರಿಹಾಯ್ದರು. ಇನ್ನು 180 ಕೋಟಿ ಖರ್ಚು ಮಾಡಿ, ಜಾತಿ ಗಣತಿ ಮಾಡಿದ್ದಾರೆ. ಆದರೆ ಯಾಕಿನ್ನು ವರದಿ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿದರು. ಅಲ್ಲದೇ ಈ ಕೂಡಲೇ ವರದಿ ಬಿಡುಗಡೆ ಮಾಡಿ ಎಂದು ಈಶ್ವರಪ್ಪ ಆಗ್ರಹಿಸಿದರು.