ಟಿಪ್ಪು ಸುಲ್ತಾನ್ ಓರ್ವ ನಿಜವಾದ ಮುಸ್ಲೀಮನೇ ಅಲ್ಲ. ಆದ್ದರಿಂದ ಆತನ ಹೆಸರನ್ನು ಹಜ್ ಭವನಕ್ಕೆ ಇಡಲು ಸಾಧ್ಯವಿಲ್ಲ ಎಂದು ಬಿಜೆಪಿ ಮುಖಂಡರು ಸಿಎಂಗೆ ಮನವಿ ಮಾಡಲು ಮುಂದಾಗಿದ್ದಾರೆ.
ಮಂಡ್ಯ : ಟಿಪ್ಪು ನಿಜವಾದ ಮುಸಲ್ಮಾನ ಅಲ್ಲ, ಟಿಪ್ಪು ಸುಲ್ತಾನ್ ಓರ್ವ ಗದ್ದಾರ್. ಆದ್ದರಿಂದ ಹಜ್ ಭವನಕ್ಕೆ ಟಿಪ್ಪು ಹೆಸರಿಡುವುದು ಬೇಡ ಎಂದು ಮಂಡ್ಯದ ಬಿಜೆಪಿ ಕಾರ್ಯಕರ್ತರು ಸಿ ಎಂ ಕುಮಾರಸ್ವಾಮಿ ಅವರಿಗೆ ಟಿಪ್ಪು ಬಗೆಗಿನ ಸಿಡಿಯೊಂದನ್ನ ರವಾನಿಸಲು ಮಂದಾಗಿದ್ದಾರೆ.
ಬ್ರಿಟಿಷ್ ಕಾಲದ ಗ್ರಂಥಗಳಾದ ಹೈದರಿಯ ನಿಶಾನಿ, ತಾರೀಕೆ ಟಿಪ್ಪು, ಹಾಗೂ ಬ್ರಿಟಿಷ್ ಅಧಿಕಾರಿ ಲೂಯಿಸ್ ರೈಸ್ ಬರೆದ ಮೈಸೂರು ಗೆಜೆಟಿಯನ್ ಪುಟಗಳನ್ನು ತೆರೆದು ನೋಡಿದರೆ ಟಿಪ್ಪುವಿನ ಮತಾಂಧತೆ ಹಾಗೂ ಕ್ರೂರತೆ, ಹಿಂದು ವಿರೋಧಿತನ ಅನಾವರಣಗೊಳ್ಳುತ್ತದೆ. ಹಾಗಾಗಿ ಈ ಎಲ್ಲಾ ಗ್ರಂಥಗಳ ಸಾಕ್ಷಿ ಪುಟಗಳನ್ನು ಸಿಡಿ ಮಾಡಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವ್ರಿಗೆ ರವಾನಿಸುತ್ತೆವೆ, ಅವ್ರು ಈ ಸಾಕ್ಷಿಗಳನ್ನು ಸಚಿವರೊಂದಿಗೆ ನೋಡಲಿ.
ಆನಂತರ ಟಿಪ್ಪು ಹೆಸರನ್ನು ಹಜ್ ಭವನಕ್ಕೆ ನಾಮಕರಣ ಮಾಡಬೇಕೆನ್ನಿಸಿದರೆ ಮಾಡಲಿ, ಟಿಪ್ಪು ಮುಸಲ್ಮಾನನೇ ಅಲ್ಲ ಅವನು ಒಬ್ಬ ಗದ್ದಾರ್, ಪರ್ಶಿಯನ್ ದೇಶದಿಂದ ಕುದುರೆ ವ್ಯಾಪರಕ್ಕೆ ಬಂದು ಮೈಸೂರು ಆಸ್ಥಾನದಲ್ಲಿ ಆಶ್ರಯ ಪಡೆದು ಉಂಡ ಮನೆಗೆ ಕನ್ನ ಹಾಕುವ ಕೆಲಸ ಮಡಿದ್ದು ಟಿಪ್ಪು.
ಈ ರೀತಿ ದ್ರೋಹ ಬಗೆಯುವವರನ್ನು ಅಪ್ಪಟ ಮುಸಲ್ಮಾನರು ಎನ್ನುವುದಿಲ್ಲ. ಇದನ್ನು ಸ್ವತಃ ಮುಸಲ್ಮಾನರೇ ಒಪ್ಪುವುದಿಲ್ಲ. ಹಾಗಾಗಿ ಜಮೀರ್ ಅಹಮದ್ ಖಾನ್ ಗೆ ಕೋಮು ಸೌಹಾರ್ದದ ಬಗ್ಗೆ ಒಲವಿದ್ದರೆ ಹಜ್ ಭವನಕ್ಕೆ ಟಿಪ್ಪು ಹೆಸರಿಡುವುದನ್ನ ನಿಲ್ಲಿಸಬೇಕು. ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಟಿಪ್ಪುವಿನ ಹೆಸರಲ್ಲಿ ರಕ್ತಚರಿತ್ರೆ ಬರೆದಿತ್ತು. ಮುಂದೆ ಸಮ್ಮಿಶ್ರ ಸರ್ಕಾರ ಈ ರೀತಿ ಮಾಡುವುದು ಬೇಡ. ಒಂದು ವೇಳೆ ಹಜ್ ಭವನಕ್ಕೆ ಟಿಪ್ಪು ಹೆಸರಿಟ್ಟರೇ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Last Updated 24, Jun 2018, 12:11 PM IST