ಬೆಂಗಳೂರು (ಸೆ.21): ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶಿಸುವಲ್ಲಿ ಹಿಂದೇಟು ಹಾಕುತ್ತಿದೆ. ತಮಿಳುನಾಡಿಗೆ ನೀರು ಬಿಡದಂತೆ ಸಲಹೆ ನೀಡಿದ್ದ ಬಿಜೆಪಿ ಈಗ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ. ಸರ್ಕಾರದ ಪಾಲಿಗೆ ಮರಣಶಾಸನವಾಗಿರುವ ಕಾವೇರಿ ನಿರ್ವಹಣಾ ಮಂಡಳಿಯ ಬಗ್ಗೆ ಸಹ ದನಿ ಎತ್ತಿಲ್ಲ. ಇದರ ರಚನೆಯ ವಿರುದ್ದ ಹೋರಾಟ ಅನಿವಾರ್ಯ ಆದರೆ ರಾಜಕೀಯ ಪಕ್ಷಗಳ ತಿಕ್ಕಾಟಕ್ಕೆ ರಾಜ್ಯದ ಜನರ ಹಿತಾಸಕ್ತಿಯನ್ನು ಬಲಿ ಕೊಡುತ್ತಿವೆ.
ರಾಜ್ಯದ ಬಿಜೆಪಿ 18 ಶಾಸಕರು ಕಾವೇರಿ ವಿಚಾರದಲ್ಲಿ ಪ್ರಧಾನಿ ಮೇಲೆ ಒತ್ತಡ ಹೇರಬೇಕಿತ್ತು ಆದರೆ ಯಾರೊಬ್ಬ ಶಾಸಕನೂ ಈ ವಿಚಾರದ ಬಗ್ಗೆ ದನಿ ಎತ್ತಿಲ್ಲ. ಸಿಎಂ ಸಭೆಗೆ ಕೂಡಾ ಗೈರು ಹಾಜರಾಗಿದೆ.
