ನವದೆಹಲಿ, [ಜ.16]: ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು H1N1 ಸೋಂಕಿನಿಂದ ಬಳಲುತ್ತಿದ್ದಾರೆ.

 H1N1 ಸೋಂಕು ತಗುಲಿರುವ ಬಗ್ಗೆ ಸ್ವತಃ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಟ್ವಿಟ್ಟರ್ ಮೂಲಕ ಬಹಿರಂಗಪಡಿಸಿದ್ದಾರೆ. ಸೋಂಕು ಹಿನ್ನೆಲೆಯಲ್ಲಿ ಅವರು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಮಹಾಸಂಸ್ಥೆ ಏಮ್ಸ್ ನಲ್ಲಿ (AIIMS) ಚಿಕಿತ್ಸೆ ಪಡೆಯುತ್ತಿದ್ದಾರೆ.

ಈಶ್ವರನ ಕೃಪೆ, ಜನರ ಪ್ರೀತಿ ಹಾರೈಕೆಯಿಂದ ಗುಣಮುಖನಾಗ್ತೇನೆ. ಎಲ್ಲರ ಶುಭಕಾಮನೆಗಳಿಂದ ನಾನು ಶೀಘ್ರವೇ ಗುಣಮುಖನಾಗ್ತೇನೆ ಎಂದು ಶಾ ತಮ್ಮ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

ಹಂದಿ ಜ್ವರದಿಂದ ಬಲಲುತ್ತಿರುವ ಅಮಿತ್ ಶಾ ಅವರಿಗೆ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ.