ನವದೆಹಲಿ[ಜೂ. 19]  ಸಂಸದ ಸನ್ನಿ ಡಿಯೋಲ್ ಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಲೋಕಸಭೆ ಚುನಾವಣೆಯಲ್ಲಿ ನಿಗದಿಪಡಿಸಲಾಗಿದ್ದ 70 ಲಕ್ಷ ರೂ.  ವೆಚ್ಚದ ಮಿತಿಯನ್ನು ಮೀರಿದ್ದು ವಿವರಣೆ ನೀಡಲು ಸೂಚಿಸಿದೆ.

ಪಂಜಾಬ್ ನ ಗುರ್ದಾಸ್ಪುರ್ ನಿಂದ ಸನ್ನಿ ಡಿಯೋಲ್ ಆಯ್ಕೆಯಾಗಿದ್ದರು. ಗುರ್ದಾಸ್ಪುರ್ ಜಿಲ್ಲಾಧಿಕಾರಿ ಹಾಗೂ ಚುನಾವಣಾ ಅಧಿಕಾರಿ ವಿಪೂಲ್ ಉಜ್ವಲ್ ಅವರು ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು  86 ಲಕ್ಷ ರೂ.ಖರ್ಚು ಮಾಡಿದ ಮಾಹಿತಿ ಇದೆ ಎಂದಿದ್ದಾರೆ.

ಚುನಾವಣಾ ಆಯೋಗದ ಮಾರ್ಗದರ್ಶಿ ಹೇಳುವಂತೆ ಚುನಾವಣಾ ಪ್ರಕ್ರಿಯೆ ಮುಗಿದ 90 ದಿನಗಳ ಒಳಗೆ ನೋಂದಾಯಿತ ರಾಜಕೀಯ ಪಕ್ಷಗಳು ಖರ್ಚು ವೆಚ್ಚದ ವಿವರವನ್ನು ಸಲ್ಲಿಕೆ ಮಾಡಬೇಕು.