ಕಾಂಗ್ರೆಸ್’ನ  ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಹುಲ್ ಗಾಂಧಿ ಅವರಿಗೆ ಶುಭ ಹಾರೈಸಿ ನೂರ್ಕಾಲ ಬಾಳಲಿ ಎಂದು ಹೇಳುವ ಮೂಲಕ ಲ್ಲರಿಗೂ ಅಚ್ಚರಿಯನ್ನುಂಟು ಮಾಡಿದ್ದ ಬಿಜೆಪಿ ಎಂಪಿ ಶತ್ರುಘ್ನ ಸಿನ್ಹಾ ಇದೀಗ ಮತ್ತೆ ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದ್ದಾರೆ.

ನವದೆಹಲಿ (ಡಿ.17): ಕಾಂಗ್ರೆಸ್’ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಹುಲ್ ಗಾಂಧಿ ಅವರಿಗೆ ಶುಭ ಹಾರೈಸಿ ನೂರ್ಕಾಲ ಬಾಳಲಿ ಎಂದು ಹೇಳುವ ಮೂಲಕ ಲ್ಲರಿಗೂ ಅಚ್ಚರಿಯನ್ನುಂಟು ಮಾಡಿದ್ದ ಬಿಜೆಪಿ ಎಂಪಿ ಶತ್ರುಘ್ನ ಸಿನ್ಹಾ ಇದೀಗ ಮತ್ತೆ ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಾದವರಲ್ಲಿ ರಾಹುಲ್ ಗಾಂಧಿ ಅತ್ಯಂತ ಅರ್ಹ ವ್ಯಕ್ತಿ ಎಂದು ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಅತ್ಯಂತ ನ್ಯಾಚುರಲ್ ಹಾಗೂ ಅರ್ಹವಾದ ವ್ಯಕ್ತಿತ್ವ ಹೊಂದಿ ಅಧ್ಯಕ್ಷ ರಾಹುಲ್ ಎಂದಿದ್ದು, ದೇಶದ ನಿಜವಾದ ಸ್ಫೂರ್ತಿ, ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿದ ರಾಹುಲ್ ಗಾಂಧಿ ನಿಮ್ಮ ಶುಭ ಹಾರೈಕೆಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಇತ್ತೀಚೆಗೆ ಶತ್ರುಘ್ನ ಸಿನ್ಹಾ ಅವರು ಬಿಜೆಪಿ ವಿರುದ್ಧವೇ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೇ ಗುಜರಾತ್ ಚುನಾವಣೆಯಲ್ಲಿ ಪಾಕ್ ಕೈವಾಡವಿದೆ ಎಂದು ಪ್ರಧಾನಿ ಹೇಳಿಕೆಗೂ ಕೂಡ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.