ಕೋಲ್ಕತಾ[ಆ17]: ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ ಕಾಂಪೌಂಡ್‌ವೊಂದಕ್ಕೆ ಡಿಕ್ಕಿ ಹೊಡೆಸಿದ ಸಂಬಂಧ ಬಿಜೆಪಿ ಸಂಸದೆಯೂ ಆಗಿರುವ ಬಂಗಾಳಿ ಚಿತ್ರ ನಟಿ ರೂಪಾ ಗಂಗೂಲಿ ಅವರ ಪುತ್ರನನ್ನು ಕೋಲ್ಕತಾ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ವೇಗವಾಗಿ ವಾಹನ ಚಾಲನೆ ಮಾಡಿ, ದಕ್ಷಿಣ ಕೋಲ್ಕತಾ ಕ್ಲಬ್‌ನ ಗೋಡೆಗೆ ಕಾರು ಡಿಕ್ಕಿ ಹೊಡೆಸಿ, ಆಸ್ತಿಗೆ ಹಾನಿ ಮಾಡಿದ ಸಂಬಂಧ ಆಕಾಶ್‌ ಮುಖರ್ಜಿ (21)ಯನ್ನು ಪೊಲೀಸರು ಗುರುವಾರ ರಾತ್ರಿ 9.15ರ ಸುಮಾರಿಗೆ ವಶಕ್ಕೆ ತೆಗೆದುಕೊಂಡು ಬಂಧಿಸಿದ್ದಾರೆ. ಆಕಾಶ್‌ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮದ್ಯ ಸೇವಿಸಿರುವುದು ದೃಢಪಟ್ಟಿದೆ. ವೇಗವಾಗಿ ಆಕಾಶ್‌ ಚಾಲನೆ ಮಾಡಿದ ಸಂದರ್ಭದಲ್ಲಿ ಹಲವು ಸಾರ್ವಜನಿಕರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.

ಕಾರು ಗೋಡೆಗೆ ಡಿಕ್ಕಿ ಹೊಡೆದ ರಭಸಕ್ಕೆ ಆಕಾಶ್‌ ಕಾರಿನಲ್ಲೇ ಬಂಧಿಯಾಗಿದ್ದರು. ಅವರ ತಂದೆ ಬಂದು ಹೊರಗೆಳೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.