ಕಬ್ರಸ್ತಾನ ಕಮಿಟಿಯಲ್ಲಿ ಕ್ರೈಸ್ತರ ಬಗ್ಗೆ ಬಿಜೆಪಿ ಸಂಸದ ಹೇಳಿದ್ದೇನು?

BJP MP calls Christians 'angrez', says they played no role in India's freedom struggle
Highlights

ಕ್ರೈಸ್ತರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿರಲಿಲ್ಲ

ಮುಂಬೈ ಬಿಜೆಪಿ ಸಂಸದ ಗೋಪಾಲ್ ಶೆಟ್ಟಿ ಹೇಳಿಕೆ

ಬ್ರಿಟನ್ ಮೂಲದ ಕ್ರೈಸ್ತರು ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲ

ಗೋಪಾಲ್ ಶೆಟ್ಟಿ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು

ಮುಂಬೈ(ಜು.6): ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರೈಸ್ತರ ಪಾತ್ರ ಇಲ್ಲ ಎಂದು ಹೆಳುವ ಮೂಲಕ, ಮುಂಬೈ ಬಿಜೆಪಿ ಸಂಸದ ಗೋಪಾಲ್ ಶೆಟ್ಟಿ ಹೊಸ ವಿವಾದ ಸೃಷ್ಟಿಸಿದ್ದಾರೆ. 

ಭಾರತದ ಕ್ರೈಸ್ತರು ಬ್ರಿಟನ್ ಮೂಲದವರಾಗಿದ್ದು, ತಮ್ಮ ಮಾತೃಭೂಮಿ ನಿಷ್ಠೆಯಿಂದಾಗಿ ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿರಲಿಲ್ಲ ಎಂದು ಗೋಪಾಲ್ ಶೆಟ್ಟಿ ಹೇಳಿದ್ದಾರೆ. ಭಾರತ ಹಿಂದೂಗಳಿಂದಾಗಲೀ ಅಥವಾ ಮುಸ್ಲಿಮರಿಂದಾಗಲಿ ಸ್ವಾತಂತ್ರ್ಯ ಪಡೆಯಲಿಲ್ಲ. ನಾವು ಹಿಂದೂಸ್ಥಾನಿಗಳಾಗಿ ಹೋರಾಟ ಮಾಡಿದ್ದಕ್ಕಾಗಿ ಸ್ವಾತಂತ್ರ್ಯ ದೊರೆಯಿತು ಎಂದು ಗೋಪಾಲ್ ಶೆಟ್ಟಿ ಹೇಳಿದ್ದಾರೆ. 

ಕಬ್ರಸ್ತಾನ್ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗೋಪಾಲ್ ಶೆಟ್ಟಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಗೋಪಾಲ್ ಶೆಟ್ಟಿ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ಬಿಜೆಪಿಗೆ ಇತಿಹಾಸ ಗೊತ್ತಿಲ್ಲ. ಬಿಜೆಪಿ ಸಂಸದನಿಗೂ ಇತಿಹಾಸ ಗೊತ್ತಿಲ್ಲ. ಅಥವಾ ಕೋಮುಸೌಹಾರ್ದತೆಯನ್ನು ಹಾಳುಮಾಡುವುದಕ್ಕೆ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದೆ.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸದೇ ಇದ್ದದ್ದು ಕ್ರೈಸ್ತರೋ ಅಥವಾ ಮುಸ್ಲಿಮರೋ ಅಲ್ಲ, ಬದಲಾಗಿ ಆರ್‌ಎಸ್‌ಎಸ್ ಹಾಗೂ ಹಿಂದೂ ಮಹಾಸಭಾ ಸ್ವಾತಂತ್ರ್ಯ ಸಂಗ್ರಾಮದಲ್ಲಿ  ಭಾಗವಹಿಸಿರಲಿಲ್ಲ. ಇದು ಬಿಜೆಪಿಯ ಇತಿಹಾಸ ಎಂದು ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.

loader