ಮುಂಬೈ(ಡಿ.11): ರಾಮ ಮಂದಿರ ನಿರ್ಮಾಣ ವಿಚಾರ, ಪ್ರತಿಮೆ ಸ್ಥಾಪನೆ ಹಾಗೂ ನಗರಗಳ ಹೆಸರು ಬದಲಾವಣೆಗೆ ಹೆಚ್ಚು ಗಮನ ಹರಿಸಿದ್ದೇ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸಂಜಯ್ ಕಾಕಡೆ ಕಿಡಿಕಾರಿದ್ದಾರೆ.

ಫಲಿತಾಂಶದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಂಜಯ್ ಕಾಕಡೆ, ರಾಜಸ್ಥಾನ ಮತ್ತು ಛತ್ತೀಸ್ ಗಢದ ಸೋಲು ನಿರೀಕ್ಷಿತ. ಆದರೆ ಮಧ್ಯ ಪ್ರದೇಶದಲ್ಲಿ ಹಿನ್ನಡೆ ಅನುಭವಿಸಿರುವುದು ಅಚ್ಚರಿ ಮೂಡಿಸಿದೆ ಎಂದು ಹೇಳಿದ್ದಾರೆ.

ನಾವು ಅಭಿವೃದ್ಧಿ ವಿಚಾರ ಮರೆತು ರಾಮ ಮಂದಿರ ನಿರ್ಮಾಣಕ್ಕೆ, ಪ್ರತಿಮೆ ನಿರ್ಮಾಣಕ್ಕೆ ಮತ್ತು ಹಲವು ನಗರಗಳ ಹೆಸರು ಬದಲಾವಣೆಗೆ ಹೆಚ್ಚು ಆದ್ಯತೆ ನೀಡಿದ್ದೇ ಈ ಸೋಲಿಗೆ ಕಾರಣ ಕಾಕಡೆ ಅಭಿಪ್ರಾಯಪಟ್ಟಿದ್ದಾರೆ.